ಪ್ರಾಚೀನ ಮಾನವರ, ಹಿಮಯುಗ ಪ್ರಾಣಿಗಳ ಅವಶೇಷಗಳು ಪತ್ತೆ

Update: 2018-02-20 18:21 GMT

ಮೆಕ್ಸಿಕೊ ಸಿಟಿ, ಫೆ. 20: ಮೆಕ್ಸಿಕೊದ ಬೃಹತ್ ನೀರು ತುಂಬಿದ ಗುಹೆಯೊಂದರಲ್ಲಿ ಉತ್ಖನನ ನಡೆಸಿರುವ ಪ್ರಾಚ್ಯ ವಸ್ತು ಸಂಶೋಧಕರು ಕನಿಷ್ಠ 9,000 ವರ್ಷಗಳ ಹಿಂದಿನ ಪ್ರಾಚೀನ ಮಾನವರ ಅವಶೇಷಗಳು ಮತ್ತು ಕೊನೆಯ ಹಿಮ ಯುಗದಲ್ಲಿ ಭೂಮಿಯನ್ನು ಸುತ್ತಿದ ಪ್ರಾಣಿಗಳ ಮೂಳೆಗಳನ್ನು ಪತ್ತೆಹಚ್ಚಿದ್ದಾರೆ.

ಇತ್ತೀಚೆಗೆ ಮುಳುಗುಗಾರರ ತಂಡವೊಂದು ಪೂರ್ವ ಮೆಕ್ಸಿಕೊದಲ್ಲಿರುವ ಎರಡು ನೀರಿನಡಿಯ ಬೃಹತ್ ಗುಹೆಗಳನ್ನು ಪರಸ್ಪರ ಸಂಪರ್ಕಿಸಿದ್ದಾರೆ. ಇದನ್ನು ಭೂಮಿಯ ಮೇಲಿನ ಅತಿ ದೊಡ್ಡ ನೀರಿನಡಿಯ ಗುಹೆ ಎಂಬುದಾಗಿ ಭಾವಿಸಲಾಗಿದೆ. ಈ ಸಂಶೋಧನೆಯು ಪ್ರಾಚೀನ ಮಾಯಾ ನಾಗರಿಕತೆಯ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬಹುದು ಎಂದು ಭಾವಿಸಲಾಗಿದೆ.

347 ಕಿ.ಮೀ. ಉದ್ದದ ಗುಹೆಯಲ್ಲಿ 248 ನೀರು ಇಂಗು ಗುಂಡಿಗಳನ್ನು ಪತ್ತೆಹಚ್ಚಿರುವುದಾಗಿ ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News