ಹಿಂದೂ ಮಹಾಸಾಗರ ಪ್ರವೇಶಿಸಿರುವ ಚೀನಾದ 11 ಯುದ್ಧ ನೌಕೆಗಳು

Update: 2018-02-20 18:44 GMT

ಶಾಂೈ (ಚೀನಾ), ಫೆ. 20: ಮಾಲ್ದೀವ್ಸ್‌ನ ಸಾಂವಿಧಾನಿಕ ಬಿಕ್ಕಟ್ಟಿನ ಅವಧಿಯಲ್ಲಿ ಚೀನಾದ 11 ಯುದ್ಧ ನೌಕೆಗಳು ಪೂರ್ವ ಹಿಂದೂ ಮಹಾಸಾಗರವನ್ನು ಪ್ರವೇಶಿಸಿವೆ ಎಂದು ಚೀನಾದ ಸುದ್ದಿ ವೆಬ್‌ಸೈಟ್ ‘ಸಿನ.ಕಾಮ್.ಸಿಎನ್’ ರವಿವಾರ ವರದಿ ಮಾಡಿದೆ.

ಹಲವು ಡಿಸ್ಟ್ರಾಯರ್‌ಗಳು, ಕನಿಷ್ಠ ಒಂದು ಫ್ರಿಗೇಟ್, 30,000 ಟನ್ ಸಾಮರ್ಥ್ಯದ ಉಭಯಚರ ಟ್ರಾನ್ಸ್‌ಪೋರ್ಟ್ ಡಾಕ್ ಮತ್ತು 3 ಬೆಂಬಲ ಟ್ರಾಂಕರ್‌ಗಳು ಹಿಂದೂ ಮಹಾ ಸಾಗರವನ್ನು ಪ್ರವೇಶಿಸಿದವು ಎಂದು ಅದು ಹೇಳಿದೆ.

‘‘ಯುದ್ಧ ನೌಕೆಗಳು ಮತ್ತು ಇತರ ಸಲಕರಣೆಗಳನ್ನು ನೋಡಿದರೆ, ಭಾರತ ಮತ್ತು ಚೀನಾ ನೌಕಾಪಡೆಗಳ ನಡುವಿನ ವ್ಯತ್ಯಾಸ ಹೆಚ್ಚೇನಿಲ್ಲ’’ ಎಂದು ವೆಬ್‌ಸೈಟ್ ಹೇಳಿದೆ.

ಚೀನಾದ ಬೆಲ್ಟ್ ಮತ್ತು ರಸ್ತೆ ಯೋಜನೆಯ ಪಾಲುದಾರನಾಗಿರುವ ಮಾಲ್ದೀವ್ಸ್ ಅದರ ಮಿತ್ರದೇಶವಾಗಿದೆ.

ಆದರೆ, ಇವುಗಳನ್ನು ಯಾವ ಕಾರಣಕ್ಕಾಗಿ ಅಥವಾ ಎಷ್ಟು ಸಮಯ ನಿಯೋಜಿಸಲಾಗಿದೆ ಎಂಬುದನ್ನು ಅದು ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News