ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ; ಓರ್ವ ಯೋಧ ಹುತಾತ್ಮ

Update: 2018-02-21 05:21 GMT

ಶ್ರೀನಗರ. ಫೆ 21: ಜಮ್ಮು ಮತ್ತು ಕಾಶ್ಮೀರದ ತಂಗ್ ಧಾರ್ ನ ಗಡಿ ನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನ, ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್ ಎಫ್ ನ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಎಸ್.ಕೆ. ಮುರ್ಮು (28)  ಹುತಾತ್ಮರಾದ ಬಿಎಸ್ ಎಫ್ ಯೋಧ. ಪಾಕಿಸ್ತಾನದ ಸೈನಿಕರು ಮಂಗಳವಾರ ಸಂಜೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಸಿಲುಕಿ ಎಸ್.ಕೆ. ಮುರ್ಮು ಗಂಭೀರ ಗಾಯಗೊಂಡಿದ್ದರು. ಅವರ ಹೊಟ್ಟೆಯ ಭಾಗಕ್ಕೆ ಗುಂಡು ತಗಲಿತ್ತು.

ಎಸ್.ಕೆ. ಮುರ್ಮು ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ ಎಸ್ ಕೆ ಮುರ್ಮು ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಿಹಾರದ ಜಮುಯಿ ಜಿಲ್ಲೆಯ ನಿವಾಸಿಯಾಗಿರುವ ಮುರ್ಮು ಅವರು 2013ರಲ್ಲಿ ಬಿಎಸ್ ಎಫ್ ಗೆ ಸೇರ್ಪಡೆಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News