ಕೆ.ಸಿ.ಎಫ್. ಬಹರೈನ್ ವತಿಯಿಂದ ಸಂಭ್ರಮದ ಕೆ.ಸಿ.ಎಫ್. ಡೇ ಆಚರಣೆ

Update: 2018-02-22 06:43 GMT

ಬಹರೈನ್, ಫೆ.22: ಕೆಸಿಎಫ್ ಐದನೇ ವರ್ಷಾಚರಣೆ 'ಕೆಸಿಎಫ್ ಡೇ' ಕಾರ್ಯಕ್ರಮವು ಬಹರೈನ್ ಕೆಸಿಎಫ್ ನಾರ್ತ್ ಹಾಗೂ ಸೌತ್ ಝೋನ್ ವತಿಯಿಂದ ಬಹರೈನ್ ನ ಹೂರ ಅನಾರತ್ ಹಾಲ್ ನಲ್ಲಿ ಇತ್ತೀಚೆಗೆ  ನಡೆಯಿತು. 

ಕಾರ್ಯಕ್ರಮವು ಹೈದರ್ ಸಅದಿ ದುಆದೊಂದಿಗೆ ಆರಂಭಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್ ಸೌತ್ ಝೋನ್ ಅಧ್ಯಕ್ಷ ಮನ್ಸೂರ್ ಬೆಲ್ಮ ಮಾತನಾಡಿ, ಕೆಸಿಎಫ್ ಬಹರೈನ್ ಬೆಳೆದು ಬಂದ ಹಾದಿಯನ್ನು ವಿವರಿಸಿ ಎಲ್ಲರಿಗೂ ಕೆಸಿಎಫ್ ಡೇ ಶುಭಾಶಯ ಕೋರಿದರು.

ರಾಷ್ಟ್ರೀಯ ಸಮಿತಿ ಅಡ್ಮಿನಿಸ್ಟ್ರೇಷನ್ ಚೇರ್ಮೆನ್ ಬಶೀರ್ ಕಾರ್ಲೆ ಮಾತನಾಡಿದರು. 

'ಸಂಸ್ಕೃತಿ ಸಹಬಾಳ್ವೆ,ಸಾಂತ್ವನದ ಹೆಬ್ಬಾಗಿಲು ಕೆಸಿಎಫ್'' ಎಂಬ ವಿಷಯದಲ್ಲಿ  ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಹಾರಿಸ್ ಸಂಪ್ಯ ದಿಕ್ಶೂಚಿ ಭಾಷಣ  ಮಾಡಿದರು.

ಇದೇ ಸಂದರ್ಭ ಪುರುಷರಿಗೆ, ಸ್ತ್ರೀಯರಿಗೆ ಮತ್ತು ಹಾಗೂ ಪುಟಾಣಿ ಮಕ್ಕಳಿಗೆ ಸೆಕ್ಟರ್ ಮಟ್ಟದಲ್ಲಿ ಆಯೋಜಿಸಿದ ಮನೋರಂಜನೆ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು  ಕಾರ್ಯಕ್ರಮ ನಡೆದವು.

ಸಮಾರೋಪ ಸಮಾರಂಭವು ಕೆಸಿಎಫ್ ಬಹರೈನ್ ನಾರ್ತ್ ಝೋನ್ ಸಮಿತಿಯ ಅಧ್ಯಕ್ಷ ಹನೀಫ್ ಗುರುವಾಯನಕೆರೆ ಅಧ್ಯಕ್ಷತೆಯಲ್ಲಿ ನಡೆಯಿತು.  ಕೆಸಿಎಫ್ ಐಎನ್ಸಿ ಬಹರೈನ್  ನೇತಾರ ಅಲಿ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿಯ ಎಜುಕೇಶನ್ ವಿಭಾಗದ ಕಾರ್ಯದರ್ಶಿ ಖಲಂದರ್ ಶರೀಫ್ ಸ್ವಾಗತ ಭಾಷಣ ಮಾಡಿದರು.

ಕೆಸಿಎಫ್ ಐಎನ್ಸಿ ಬಹರೈನ್  ನೇತಾರ ಜಮಾಲುದ್ದೀನ್ ವಿಟ್ಲ ಪ್ರಾಸ್ತಾವಿಕ  ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಐಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಝೈನುದ್ದೀನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಂ.ಸಿ.ಕರೀಂ ಹಾಜಿ ಹಾಗೂ ಇಂಡಿಯನ್ ಸ್ಕೂಲ್ ಉಪಾಧ್ಯಕ್ಷ ಜಾಫರ್ ಮೊಯ್ದಿನ್  
ಮಾತನಾಡಿ ಶುಭ ಹಾರೈಸಿದರು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ವತಿಯಿಂದ ಕಂಪ್ಯೂಟರ್ ಕಲಿಯಲು ಆಸಕ್ತಿ ಇರುವವರಿಗಾಗಿ ನೂತನ ಕಂಪ್ಯೂಟರ್ ತರಬೇತಿ ತರಗತಿಯನ್ನು ಅರ್ಜಿ ಫಾರಂ ನೀಡುವ ಮೂಲಕ ಉದ್ಘಾಟಿಸಲಾಯಿತು.

ಕೆಸಿಎಫ್ ಬಹರೈನಾದ್ಯಂತ ನಡೆದ ಅಸ್ಸುಫ್ಫಾ 2 ನೇ ಹಂತದ ಪರೀಕ್ಷೆಗಳಲ್ಲಿ ಹಾಜರಾದವರಿಗೆ ಸರ್ಟಿಫಿಕೆಟ್ ವಿತರಣೆ ಹಾಗೂ ಸೆಕ್ಟರ್ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರಿಗೆ ಹಾಗೂ ಪ್ರತೀ ಸೆಕ್ಟರ್ ಗಳಲ್ಲಿ ಉತ್ತಮ ಕಾರ್ಯಕರ್ತನನ್ನು ಆಯ್ಕೆ ಮಾಡಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಅಬೂಬಕರ್ ಮದನಿ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎಸ್.ಎಂ.ಫಾರೂಕ್ ಕುಂಬ್ರ, ಅಝೀಝ್ ಸುಳ್ಯ, ಐಎನ್ಸಿ ನೇತಾರರಾದ ಜಮಾಲುದ್ದೀನ್ ವಿಟ್ಲ, ಅಲಿ ಮುಸ್ಲಿಯಾರ್, ಫಕ್ರುದ್ದೀನ್ ಹಾಜಿ, ಬಶೀರ್ ಕಾರ್ಲೆ ಹಾಗೂ ಸುನ್ನೀ ಉಲಮಾ ಒಕ್ಕೂಟದ ಸಾರಥಿಗಳಾದ ಹೈದರ್  ಸಅದಿ, ಅಬೂಬಕರ್ ಮದನಿ ಮಂಚಿ, ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿ, ಬಶೀರ್ ಸಅದಿ ನಾಳ, ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ವೇಣೂರು ಮುಹಮ್ಮದ್ ಅಲಿ ಉಸ್ತಾದ್, ಹನೀಫ್ ಮುಸ್ಲಿಯಾರ್  ಇರ್ದೆ ಹಾಗೂ ಇತರ ಸಂಘಟನೆಗಳ ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಕಾರ್ಯದರ್ಶಿ ಲತೀಫ್ ಪೇರೊಲಿ ಹಾಗೂ ಕೆ.ಸಿ.ಎಫ್ ಸೌತ್ ಝೋನ್ ಪಬ್ಲಿಕೇಶನ್ ಕಾರ್ಯದರ್ಶಿ ಆಸಿಫ್ ಇಂದಬೆಟ್ಟು ನೆರವೇರಿಸಿದರು. ಸಮದ್ ಉಜಿರೆಬೆಟ್ಟು ಸ್ವಾಗತಿಸಿದರು. ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಭಾಗದ ಅಧ್ಯಕ್ಷ ನಾಸಿರ್ ನಾಳ ವಂದಿಸಿದರು. ಕೆಸಿಎಫ್ ನಾರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ಅಝೀಮ್ ಕಾಪು ಕಿರಾಅತ್ ಪಠಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News