ನ್ಯೂಝಿಲೆಂಡ್ ತಂಡಕ್ಕೆ ಐಶ್ ಸೋಧಿ ವಾಪಸ್

Update: 2018-02-22 18:47 GMT

ವೆಲ್ಲಿಂಗ್ಟನ್, ಫೆ.22: ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ ನ್ಯೂಝಿಲೆಂಡ್ ತಂಡಕ್ಕೆ ಸ್ಪಿನ್ನರ್ ಐಶ್ ಸೋಧಿ ಅವಕಾಶ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಧಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾರತ ಮೂಲದ ಸೋಧಿ 2017ರ ಮೇನಲ್ಲಿ ಕಿವೀಸ್ ಪರ ಕೊನೆಯ ಬಾರಿ ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದರು. ಮಿಚೆಲ್ ಸ್ಯಾಂಟ್ನರ್(ಮಂಡಿನೋವು) ಹಾಗೂ ಟಾಡ್ ಅಸ್ಟ್ಲೆ(ಸ್ನಾಯು ಸೆಳೆತ) ಗಾಯಗೊಂಡಿರುವ ಕಾರಣ 14 ಸದಸ್ಯರ ಕಿವೀಸ್ ತಂಡದಲ್ಲಿ ಸೋಧಿ ಅವಕಾಶ ಪಡೆದಿದ್ದಾರೆ.

 25ರ ಹರೆಯದ ಸೋಧಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈ ವರ್ಷ ಆಡಿರುವ 10 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಐದು ಪಂದ್ಯಗಳ ಏಕದಿನ ಸರಣಿಯು ರವಿವಾರ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್(ನಾಯಕ), ಟಾಡ್ ಅಸ್ಟ್ಲೇ,ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್, ಕಾಲಿನ್ ಡಿ ಗ್ರಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್(ವಿಕೆಟ್‌ಕೀಪರ್), ಕಾಲಿನ್ ಮುನ್ರೊ, ಹೆನ್ರಿ ನಿಕೊಲ್ಸ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ ಹಾಗೂ ರಾಸ್ ಟೇಲರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News