ಟೆಸ್ಟ್ ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡ ಭಾರತ

Update: 2018-02-25 19:10 GMT

 ಜೋಹಾನ್ಸ್‌ಬರ್ಗ್, ಫೆ.25: ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿರುವ ಟೀಮ್ ಇಂಡಿಯಾಕ್ಕೆ ಶನಿವಾರ ರಾತ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಆಫ್ರಿಕ ವಿರುದ್ಧದ ಟ್ವೆಂಟಿ-20 ಸರಣಿಯ ಮೂರನೇ ಪಂದ್ಯ ಕೊನೆಗೊಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಸಿಸಿ ಹಾಲ್ ಆಫ್ ಫೇಮರ್‌ಗಳಾದ ಸುನೀಲ್ ಗವಾಸ್ಕರ್ ಮತ್ತು ಗ್ರೇಮ್ ಪೋಲಾಕ್ ಅವರು ಟೆಸ್ಟ್ ಪ್ರಶಸ್ತಿ ಮತ್ತು 1 ಮಿಲಿಯನ್ ಡಾಲರ್ ಮೊತ್ತದ ಬಹುಮಾನದ ಚೆಕ್‌ನ್ನು ಪ್ರದಾನ ಮಾಡಿದರು.

ಕಳೆದ ತಿಂಗಳು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಭಾರತ ಗೆಲುವು ದಾಖಲಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿತು.

ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 1-2 ಅಂತರದಲ್ಲಿ ಕಳೆದುಕೊಂಡಿದ್ದರೂ, ಏಕದಿನ ಸರಣಿಯಲ್ಲಿ 5-1 ಮತ್ತು ಟ್ವೆಂಟಿ-20 ಸರಣಿಯಲ್ಲಿ ್ಲ2-1 ಅಂತರದಲ್ಲಿ ಗೆಲುವಿನೊಂದಿಗೆ ಮೊದಲ ಬಾರಿ ದಕ್ಷಿಣ ಆಫ್ರಿಕ ನೆಲದಲ್ಲಿ ಅವಳಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿತ್ತು.

   ಭಾರತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದೊಂದಿಗೆ 2ನೇ ವರ್ಷಕ್ಕೆ ಕಾಲಿಟ್ಟಿದೆ. ಕೊಹ್ಲಿ ನಾಯಕತ್ವದ ಭಾರತ 2016 ಆರಂಭದಲ್ಲಿ 1 ತಿಂಗಳ ಕಾಲ ನಂ.1 ಸ್ಥಾನದಲ್ಲಿತ್ತು.ಮತ್ತೆ ಅದೇ ವರ್ಷ ನಂ.1 ಸ್ಥಾನಕ್ಕೇರಿದ್ದರೂ ಕೇವಲ 4 ದಿನಗಳ ಕಾಲ ನಂ.1 ಸ್ಥಾನ ಪಡೆದಿತ್ತು. ಅಕ್ಟೋಬರ್ 2016ರಲ್ಲಿ ಮತ್ತೆ ನಂ.1 ಸ್ಥಾನ ಗಿಟ್ಟಿಸಿಕೊಂಡ ಟೀಮ್ ಇಂಡಿಯಾವನ್ನು ಬಳಿಕ ಹಿಂದಿಕ್ಕಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ನಂ.1 ಸ್ಥಾನದೊಂದಿಗೆ 16 ತಿಂಗಳು ಪೂರೈಸಿದೆ.

ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕರಾಗಿದ್ದಾಗ ಭಾರತ ನವೆಂಬರ್ 2009ರಿಂದ ಆಗಸ್ಟ್ 2011ರ ತನಕ 21 ತಿಂಗಳುಗಳ ಕಾಲ ನಂ.1 ಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News