×
Ad

ಆಹ್ವಾನ ನೀಡದೆ ಆರೋಪ ಸರಿಯಲ್ಲ: ಸಚಿವ ಸೀತಾರಾಮ್

Update: 2018-02-28 20:50 IST

ಬೆಂಗಳೂರು, ಫೆ. 28: ಚುನಾವಣೆ ಸಮೀಪಿಸುತ್ತಿದ್ದಂತೆ ಅತ್ಯಂತ ಹಿಂದುಳಿದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಹಾಗೂ ರಮೇಶ್ ಜಿಗಜಿಣಗಿ ಅವರಿಗೆ ಆಸಕ್ತಿ ಬಂದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸೀತಾರಾಮ್ ಟೀಕಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಫೆ.26ಕ್ಕೆ ವಿಧಾನಸೌಧದಲ್ಲಿ ಅನಂತಕುಮಾರ್, ಸದಾನಂದಗೌಡ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭಿವೃದ್ಧಿ ಸಂಬಂಧ ನೀತಿ ಆಯೋಗದ ಸಭೆ ನಡೆಸಿದ್ದಾರೆ. ಸಿಎಂ ಅಥವಾ ತನಗೆ ಯಾವುದೇ ಆಹ್ವಾನವನ್ನೇ ನೀಡಿಲ್ಲ.
ಅಧಿಕಾರಿಗಳಷ್ಟೇ ಸಭೆಗೆ ಆಹ್ವಾನಿಸಲಾಗಿತ್ತು. ಆದರೂ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಭೆಯಲ್ಲಿ ಸಚಿವರು ಭಾಗವಹಿಸಿಲ್ಲವೆಂದು ಹೇಳಿರುವುದು ಸಲ್ಲ ಎಂದ ಅವರು, ತಮಗೆ ಆಹ್ವಾನ ನೀಡಿದ್ದರೆ ಖಂಡಿತ ಪಾಲ್ಗೊಳ್ಳುತ್ತಿದ್ದೆವು ಎಂದು ದಾಖಲೆ ಸಹಿತ ಸ್ಪಷ್ಟಣೆ ನೀಡಿದರು.

ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ಬಹಳ ಕೇಂದ್ರ ಸರಕಾರಕ್ಕೆ ಇದ್ದಕ್ಕಿದ್ದಂತೆ ರಾಯಚೂರು ಹಾಗೂ ಯಾದಗಿರಿ ಅಭಿವೃದ್ಧಿ ನೆನಪಾಗಿದೆ ಎಂದು ಲೇವಡಿ ಮಾಡಿದ ಸೀತಾರಾಮ್, ರಾಜ್ಯ ಸರಕಾರ ಈಗಾಗಲೇ ಎರಡು ಜಿಲ್ಲೆಗಳ ಅಭಿವೃದ್ಧಿಗೆ 400 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವೆಚ್ಚ ಮಾಡಿದೆ ಎಂದು ವಿವರ ನೀಡಿದರು.

ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಅಭಿವೃದ್ದಿಗೆ ನಿಜಕ್ಕೂ ಕಳಕಳಿ ಇದ್ದರೆ ಕೂಡಲೇ ಕೇಂದ್ರ ಸಚಿವ ಸದಾನಂದಗೌಡ ಅವರು, 500ಕೋಟಿ ರೂ.ಬಿಡುಗಡೆ ಮಾಡಿಸಲಿ. ಅದು ಬಿಟ್ಟು ಸಚಿವರ ವಿರುದ್ಧ ಸುಳ್ಳು ಆಪಾದನೆ ಮಾಡುವುದನ್ನು ಕೈಬಿಡಬೇಕೆಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News