ವಿಶ್ವ ದಾಖಲೆ ಮುರಿದ 99 ವರ್ಷದ ಆಸ್ಟ್ರೇಲಿಯದ ಈಜುಪಟು ಜಾರ್ಜ್

Update: 2018-03-03 18:40 GMT

ಗೋಲ್ಡ್‌ಕೋಸ್ಟ್,ಮಾ.3: ಮುಂದಿನ ತಿಂಗಳು 100ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಆಸ್ಟ್ರೇಲಿಯದ ಈಜುಪಟು ಜಾರ್ಜ್ ಕರೋನ್ಸ್ 50 ಮೀ. ಲಾಂಗ್ ಕೋರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ. 99ರ ವಯಸ್ಸಿನ ಜಾರ್ಜ್ ಶುಕ್ರವಾರ ನಡೆದ 100ರಿಂದ 104 ವಯಸ್ಸಿನ ಮಾಸ್ಟರ್ಸ್‌ ವಿಭಾಗದಲ್ಲಿ ಏಕೈಕ ಸ್ಪರ್ಧಿಯಾಗಿದ್ದರು. ಗೋಲ್ಡ್ ಕೋಸ್ಟ್ ಅಕ್ವೆಟಿಕ್ ಸೆಂಟರ್ ಪೂಲ್‌ನಲ್ಲಿ ನಡೆದ ಸಿಂಗಲ್ ಲೆಂಗ್ತ್‌ನಲ್ಲಿ 56.12 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದರು.

2014ರಲ್ಲಿ ಬ್ರಿಟನ್‌ನ ಜಾನ್ ಹ್ಯಾರಿಸನ್ 100-104 ವಯಸ್ಸಿನ ವಯೋಮಿತಿಯಲ್ಲಿ ನಿರ್ಮಿಸಿದ್ದ ದಾಖಲೆ(1:31.19)ಮುರಿಯಲು ಜಾರ್ಜ್‌ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ನಾನು ಇಷ್ಟೊಂದು ವರ್ಷ ಬದುಕಲು ಈಜು ಕಾರಣ ಎಂದು ಹೇಳುತ್ತಿರುವ ಮಾಜಿ ವೈದ್ಯರಾಗಿರುವ ಜಾರ್ಜ್ 80ರ ವಯಸ್ಸಿನಲ್ಲಿ ಮತ್ತೆ ಸ್ವಿಮ್ಮಿಂಗ್‌ಗೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News