ವೈಟ್ ಹೌಸ್ ಹೊರಗೆ ವ್ಯಕ್ತಿಯಿಂದ ಗುಂಡಿಟ್ಟುಕೊಂಡು ಆತ್ಮಹತ್ಯೆ

Update: 2018-03-04 05:10 GMT

 ವಾಶಿಂಗ್ಟನ್, ಮಾ.3: ಪ್ರೆಸಿಡೆಂಟ್ ಹೌಸ್‌ನ ನಾರ್ಥ್ ಲಾನ್‌ನಲ್ಲಿ ವ್ಯಕ್ತಿಯೊಬ್ಬ ಹ್ಯಾಂಡ್‌ಗನ್‌ನಿಂದ ಸ್ವತಃ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದ್ದು, ಘಟನೆಯ ಹಿನ್ನೆಲೆಯಲ್ಲಿ ವೈಟ್ ಹೌಸ್ ಕಟ್ಟಡವನ್ನು ಲಾಕ್ ಮಾಡಲಾಗಿದೆ.

    ಘಟನೆಯ ವೇಳೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ವೈಟ್ ಹೌಸ್‌ನಲ್ಲಿ ಇರಲಿಲ್ಲ. ಈ ವೇಳೆ ಟ್ರಂಪ್ ದಂಪತಿ ಫ್ಲೋರಿಡಾದ ರಿಸಾರ್ಟ್‌ಗೆ ಭೇಟಿ ನೀಡಿದ್ದರು. ಭದ್ರತಾ ತಂಡ ಘಟನೆಯ ಬಗ್ಗೆ ಅಧ್ಯಕ್ಷ ಟ್ರಂಪ್‌ಗೆ ಮಾಹಿತಿ ನೀಡಿದೆ.

ವೈಟ್ ಹೌಸ್‌ನ ಒಳಗೆ ಹಾಗೂ ಹೊರಗಿನ ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ರಹಸ್ಯ ಸೇವಾ ಅಧಿಕಾರಿಗಳ ತಂಡ ಹಾಗೂ ಇತರ ಸಿಬ್ಬಂದಿ ಸದಸ್ಯರುಗಳು ಘಟನಾ ಸ್ಥಳ ವೈಟ್ ಹೌಸ್‌ನತ್ತ ಕಳುಹಿಸಿಕೊಡಲಾಗಿದೆ. ಶೂಟಿಂಗ್ ಘಟನೆಯ ಬಳಿಕ ಪೊಲೀಸರು ಹಾಗೂ ಆ್ಯಂಬುಲೆನ್ಸ್‌ಗಳು ಸ್ಥಳದಲ್ಲಿ ಠಿಕಾಣಿ ಹೂಡಿವೆ.

  ಸದಾ ಕಾಲ ಬಿಗಿ ಭದ್ರತೆಯಿರುವ ಅಮೆರಿಕದ ಅಧ್ಯಕ್ಷರ ನಿವಾಸದ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಗುರುತನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆೆ. ಆದರೆ, ತನಿಖೆ ಮುಗಿದ ಬಳಿಕವೇ ಹೆಸರನ್ನು ಬಹಿರಂಗಪಪಡಿಸಲಾಗುತ್ತದೆ. ವೈಟ್ ಹೌಸ್‌ನ ನಾರ್ತ್ ಫೆನ್ಸ್ ಲೈನ್‌ನಲ್ಲಿ ವ್ಯಕ್ತಿಯೊಬ್ಬ ಗನ್‌ನಿಂದ ಸ್ವತಃ ಮೂರು ಸುತ್ತು ಗುಂಡಿಟ್ಟುಕೊಂಡ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಘಟನೆಯ ಬಳಿಕ ಯಾರೊಬ್ಬರಿಗೂ ಗಾಯವಾಗಿಲ್ಲ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. 

ಘಟನೆಯ ವೇಳೆ ಎನ್‌ಬಿಸಿ ನ್ಯೂಸ್ ವೈಟ್ ಹೌಸ್ ವರದಿಗಾರ ಜೆಫ್ ಬೆನ್ನೆಟ್ಟ್ ಹಾಗೂ ಇತರ ಕೆಲವು ಜನರೊಂದಿಗೆ ತಮ್ಮ ಕರ್ತವ್ಯದಲ್ಲಿ ನಿತರರಾಗಿದ್ದರು ಎಂದು ‘ಮಿರರ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News