ಹೆಚ್ಚಿನ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದ ಗೋವಾ ಸಿಎಂ ಪಾರಿಕ್ಕರ್

Update: 2018-03-07 06:15 GMT

ಪಣಜಿ, ಮಾ.7: ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿರುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಬುಧವಾರ ಬೆಳಗ್ಗೆ ರಾಜ್ಯಪಾಲ ಮೃದುಲಾ ಸಿನ್ಹಾಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

62ರ ಹರೆಯದ ಪಾರಿಕ್ಕರ್ ಮಂಗಳವಾರ ಸಂಜೆ ಮುಂಬೈಗೆ ತೆರಳಿ ೆಲೀಲಾವತಿ ಆಸ್ಪತ್ರೆಗೆ ದಾಖಲಾಗಿ ತಪಾಸಣೆಗೆ ಒಳಗಾಗಿದ್ದರು. ಬುಧವಾರ ಬೆಳಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಪಾರಿಕ್ಕರ್‌ರನ್ನು ಅಮೆರಿಕಕ್ಕೆ ಕರೆದೊಯ್ಯಲಾಗಿದೆ.

ರಾಜ್ಯ ಆಡಳಿತವನ್ನು ನೋಡಿಕೊಳ್ಳಲು ಸಂಪುಟ ಸಲಹಾ ಸಮಿತಿ ರಚಿಸಲಾಗಿದೆ. ಸಮಿತಿಯು ಹಣಕಾಸಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಮೊದಲು ಹಣಕಾಸು ಇಲಾಖೆಯನ್ನು ಸಂಪರ್ಕಿಸಲಿದೆ ಎಂದು ಪಾರಿಕ್ಕರ್ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಅಗತ್ಯವಿದ್ದಾಗ ವಿದೇಶದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಚಿವರ ಸಭೆ ನಡೆಸುವುದಾಗಿ ಪತ್ರದಲ್ಲಿ ಪಾರಿಕ್ಕರ್ ತಿಳಿಸಿದ್ದಾರೆ.

ಗೋವಾ ಹಾಗೂ ಮುಂಬೈನ ತಜ್ಞ ವೈದ್ಯರ ತಂಡ ವಿದೇಶಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ವಿದೇಶಕ್ಕೆ ತೆರಳುತ್ತಿರುವೆ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News