ಅಂತರ್ ರಾಜ್ಯ ರಹದಾರಿಗಳ ಒಪ್ಪಂದದ ಬಗ್ಗೆ ಚರ್ಚೆ
ಬೆಂಗಳೂರು, ಮಾ. 9: ಅಂತರ್ ರಾಜ್ಯ ತೆರಿಗೆ, ಸರಕು ಸಾಗಣೆ, ಮಜಲು ವಾಹನ, ಪ್ರವಾಸಿ ವಾಹನಗಳ ಕುರಿತು ನಗರದ ಜೆ.ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್ ನಲ್ಲಿ ಚರ್ಚೆ ನಡೆಯಿತು.
ಕರ್ನಾಟಕ ಸೇರಿ 8 ರಾಜ್ಯಗಳ ಸಾರಿಗೆ ಸಚಿವರು, ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರ್ಷಕ್ಕೊಮೆ ನಡೆಯುವ ಈ ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಕೌನ್ಸಿಲ್ ನಲ್ಲಿ ಕೇರಳ ಸಾರಿಗೆ ಸಚಿವ ಎ.ಕೆ ಸಸಿಂದ್ರನ್, ತಮಿಳುನಾಡಿನ ಸಾರಿಗೆ ಸಚಿವ ವಿಜಯ್ ಭಾಸ್ಕರ್ ಹಾಗೂ ರಾಜ್ಯ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಭಾಗವಹಿಸಿದ್ದರು.
ಈ ಸಂದರ್ಭ ಕೇರಳ ರಾಜ್ಯದಿಂದ 21, ತೆಲಂಗಾಣ ದಿಂದ ಒಂದು ವಿಷಯ ಪ್ರಸ್ತಾಪವಾಯಿತು. ಕೇಂದ್ರ ಸರ್ಕಾರದ ಮೊಟರ್ ವೈಹಿಕಲ್ ಕಾಯ್ದೆಯ ಬಗ್ಗೆಯೂ ಚರ್ಚೆ ನಡೆಯಿತು. ಮೋಟರ್ ವೈಹಿಕಲ್ ಕಾಯ್ದೆಯ ಬಗ್ಗೆ ತೊಂದರೆಯಾಗದಂತೆ ದಕ್ಷಿಣ ಭಾರತ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಹಳೆಯ ವಾಹನಗಳನ್ನ ಬದಲಾಯಿಸುವ ಕುರಿತೂ ಚರ್ಚೆ ನಡೆಯಿತು.
ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಾಂಗಾಣ, ಸೇರಿದಂತೆ ಹಲವು ರಾಜ್ಯಗಳ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.