×
Ad

18 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2018-03-10 19:06 IST

ಬೆಂಗಳೂರು, ಮಾ. 10: ಆಡಳಿತ ಸುಧಾರಣೆ ದೃಷ್ಟಿಯಿಂದ ರಾಜ್ಯ ಸರಕಾರ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು 18 ಮಂದಿ ಐಪಿಎಸ್ ಅಧಿಕಾರಿಗಳು ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಆದೇಶ ಹೊರಿಡಿಸಿದೆ.

ಬಿ.ದಯಾನಂದ್-ಐಜಿಪಿ-ಕೇಂದ್ರ ವಲಯ, ಅಮ್ರಿತ್ ಪೌಲ್-ಐಜಿಪಿ- ಆಡಳಿತ-ಬೆಂಗಳೂರು, ಉಮೇಶ್‌ಕುಮಾರ್-ಗೃಹ ಇಲಾಖೆ ಕಾರ್ಯದರ್ಶಿ, ಸೌಮೇಂದ್ರ ಮುಖರ್ಜಿ-ಐಜಿಪಿ ದಕ್ಷಿಣ ವಲಯ-ಮೈಸೂರು, ಎಸ್.ರವಿ-ಐಜಿಪಿ- ಬಳ್ಳಾರಿ ವಲಯ, ವಿಫುಲ್‌ಕುಮಾರ್-ಐಜಿಪಿ-ನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು.

ಎಂ.ಶಿವಪ್ರಸಾದ್-ಐಜಿಪಿ-ನಿರ್ದೇಶಕರು ಕೆಎಸ್ಸಾರ್ಟಿಸಿ (ಭದ್ರತೆ ಮತ್ತು ಜಾಗೃತ ದಳ) ಬೆಂಗಳೂರು, ಅಮಿತ್‌ಸಿಂಗ್-ಎಸ್ಪಿ-ಮೈಸೂರು, ಎಂ.ಎನ್.ಅನುಚೇತ್- ಎಸ್ಪಿ-ಸಿಐಡಿ ಬೆಂಗಳೂರು, ರವಿ ಡಿ.ಚನ್ನಣ್ಣನವರ್ ಪಶ್ಚಿಮ ವಿಭಾಗ ಡಿಸಿಪಿ- ಬೆಂಗಳೂರು, ಕುಲದೀಪ್ ಕುಮಾರ್ ಆರ್.ಜೈನ್-ಕಮಾಂಡೆಂಟ್- ಕೆಎಸ್ಸಾರ್ಪಿ ಬೆಟಾಲಿಯನ್.

ನಿಕ್ಕಮ್ ಪ್ರಕಾಶ್ ಅಮಿತ್-ಎಸ್ಪಿ ವಿಜಯಪುರ, ಡಾ.ಭೀಮಾಶಂಕರ್ ಎಸ್.ಗುಳೇದ್-ಎಸ್ಪಿ ಬೆಂಗಳೂರು ಗ್ರಾಮಾಂತರ, ಜಿ.ರಾಧಿಕಾ-ಎಸ್ಪಿ ಎಸಿಬಿ- ಬೆಂಗಳೂರು, ಡಾ.ಅನೂಪ್ ಎ.ಶೆಟ್ಟಿ-ಎಸ್ಪಿ ಗುಪ್ತಚರ ಇಲಾಖೆ, ರೇಣುಕಾ ಕೆ. ಸುಕುಮಾರ್- ಎಸ್ಪಿ ಕೊಪ್ಪಳ, ಎಸ್.ಗಿರೀಶ್-ಎಸ್ಪಿ ಮಂಡ್ಯ ಹಾಗೂ ಕಲಾ ಕೃಷ್ಣಮೂರ್ತಿ- ಈಶಾನ್ಯ ವಿಭಾಗದ ಡಿಸಿಪಿ ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News