×
Ad

ಬೆಂಗಳೂರು: ದೈಹಿಕ ಶಿಕ್ಷಕ ಆತ್ಮಹತ್ಯೆ

Update: 2018-03-11 17:38 IST

ಬೆಂಗಳೂರು, ಮಾ. 11: ದೈಹಿಕ ಶಿಕ್ಷಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಕೆಪಿ ಅಗ್ರಹಾರದ ಟೋಲ್‌ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ವೀರಣ್ಣ (31) ಆತ್ಯಹತ್ಯೆ ಮಾಡಿಕೊಂಡಿರುವ ದೈಹಿಕ ಶಿಕ್ಷಕ ಎಂದು ತಿಳಿದುಬಂದಿದೆ.

ಕೆಪಿ ಅಗ್ರಹಾರದ ಮಂಜುನಾಥ ಸ್ಕೂಲ್‌ನಲ್ಲಿ ದೈಹಿಕ ಶಿಕ್ಷಕರಾಗಿದ್ದ ವೀರಣ್ಣ, ಟೋಲ್‌ಗೇಟ್ ಬಳಿಯ ಸೆವೆನ್ ಹಿಲ್ಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಡಲಾಗಿತ್ತು. ಇದು ಇಷ್ಟವಿಲ್ಲದೆ, ಪ್ರೀತಿಸಿದ ಯುವತಿಯ ಜೊತೆ ಮದುವೆಯಾಗಲು ಸಾಧ್ಯವಾಗದೆ ವೀರಣ್ಣ, ಶನಿವಾರ ರಾತ್ರಿ 7:30ರ ಸುಮಾರಿನಲ್ಲಿ ಸಿಲ್ವರ್ ಕಪ್ ಮದ್ಯದ ಬಾಟಲಿಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಕೆಪಿ ಅಗ್ರಹಾರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News