×
Ad

ಬೆಂಗಳೂರು: ಸರಗಳ್ಳರನ್ನು ಸೆರೆ ಹಿಡಿದ ಯುವಕ

Update: 2018-03-12 18:45 IST

ಬೆಂಗಳೂರು, ಮಾ. 12: ಮಹಿಳೆಯೊಬ್ಬರ ಮಾಂಗಲ್ಯಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು, ಯುವಕನೊಬ್ಬ ಬೆನ್ನಟ್ಟಿ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.

ನಗರದ ಹೊಸಕೆರೆ ಹಳ್ಳಿಯ ರತ್ನಮ್ಮ ಎಂಬುವವರ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗುತ್ತಿದ್ದ ಸಿದ್ದಾಪುರದ ನಾಗರಾಜ(30) ಹಾಗೂ ಜೋಸೆಫ್(25) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ವಿವರ: ರತ್ನಮ್ಮ ಅವರು ರವಿವಾರ ಸಂಜೆ 7:30ರ ಸುಮಾರಿನಲ್ಲಿ ಹೊಸಕೆರೆ ಹಳ್ಳಿಯ 6ನೆ ಮುಖ್ಯರಸ್ತೆಯಲ್ಲಿ ವಾಯುವಿಹಾರ ಮಾಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಆರೋಪಿಗಳಿಬ್ಬರು ಸರ ಕಸಿದು ಪರಾರಿಯಾದರು ಎನ್ನಲಾಗಿದೆ.

ಅದೇ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ಉದ್ಯಮಿ ರವಿಕುಮಾರ್, ಬೆನ್ನಟ್ಟಿ ಹೋಗಿದ್ದು, ಬ್ಯಾಟರಾಯನಪುರದ ಮೈಸೂರು ರಸ್ತೆಯ ಬಳಿಯ ಸಂಚಾರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೇದೆ ಮಂಜುನಾಥ್ ಅವರು ಕೂಡಲೇ ರವಿಕುಮಾರ್ ಜೊತೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹಿಡಿದು ಗಿರಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News