9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಪತ್ತೆ
ಬೆಂಗಳೂರು, ಮಾ.12: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ನಾಲ್ಕು ದಿನಗಳ ಹಿಂದೆ ರಾಜ್ಯದ ಒಂಭತ್ತು ಸರಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಪ್ರಕರಣ ಸಂಬಂಧ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.
ಬೆಂಗಳೂರು: ಬಿಬಿಎಂಪಿಯ ಚಿಕ್ಕಪೇಟೆ ವಿಭಾಗದ ಘನ ತಾಜ್ಯ ನಿರ್ವಹಣೆ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಗಂಗಾಧರ್ ಅವರ ಬಳಿ ನಂದಿನಿಲೇಔಟ್, ಸುಬ್ರಮಣ್ಯನಗರ, ನಾಗರಭಾವಿ, ಮಲತ್ತಹಳ್ಳಿಯಲ್ಲಿ ಒಂದೊಂದು ಮನೆ. ಚಿಕ್ಕಲ್ಲಸಂದ್ರ ಗ್ರಾಮ, ಸಾಸುವೆಘಟ್ಟ ಗ್ರಾಮದಲ್ಲಿ ಒಂದೊಂದು ನಿವೇಶನ, 806.4 ಗ್ರಾಂ ಚಿನ್ನ, 8.2 ಕೆ.ಜಿ ಬೆಳ್ಳಿ, 1 ಓಮ್ನಿ ಕಾರು, 1 ಮಾರುತಿ ಸ್ವಿಫ್ಟ್ ಕಾರು, 1 ಇನ್ನೋವಾ ಕಾರು, 3 ದ್ವಿಚಕ್ರ ವಾಹನ, ವಿವಿಧ ಬ್ಯಾಂಕ್‌ಗಳಲ್ಲಿ 12 ಲಕ್ಷ ಠೇವಣಿ, ಎಲ್‌ಐಸಿ ವಿಮಾ ಪಾಲಿಸಿ ಹಾಗೂ 58 ರೂ. ನಗದು ಪತ್ತೆಯಾಗಿದೆ.
ಅದೇ ರೀತಿ, ಕೆಜಿಐಡಿ ಎಸ್.ಬಿ.ರುದ್ರ ಪ್ರಸಾದ್ ಬಳಿ, ಬೆಂಗಳೂರಿನ ಮಲ್ಲತ್‌ಹಳ್ಳಿ 4 ಅಂತಸ್ತಿನ ಕಟ್ಟಡ, ಚಿನ್ನ 731.21 ಗ್ರಾಂ, ಬೆಳ್ಳಿ 865.2 ಗ್ರಾಂ ಹಾಗೂ ಪತ್ನಿಯ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳಲ್ಲಿ ಸುಮಾರು 10 ಲಕ್ಷಗಳ ಬ್ಯಾಂಕ್ ಠೇವಣಿ ಮತ್ತು ವಿಮಾ ಪಾಲಿಸಿಗಳು ಪತ್ತೆಯಾಗಿವೆ.
ಬೆಳಗಾವಿ: ಅಥಣಿಯ ಹಿಪ್ಪರಗಿ ಅಣೆಕಟ್ಟು ಯೋಜನೆ ಶೇಷ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರ ಅವರ ಬಳಿ ವಿಜಾಪುರ, ಬೆಳಗಾವಿ, ಧಾರವಾಡದಲ್ಲಿ ಒಟ್ಟು 4 ಮನೆ, ಹುಬ್ಬಳ್ಳಿಯಲ್ಲಿ 1 ನಿವೇಶನ, ಬಸವನಬಾಗೇವಾಡಿಯ ವಿವಿಧೆಡೆ ಒಟ್ಟು 3 ಎಕರೆ 17 ಗುಂಟೆ ಜಮೀನು, ಒಂದೊಂದು ಕಾರು, ಸ್ಕೂಟರ್, 669 ಗ್ರಾಂ ಚಿನ್ನ, 2.876 ಕೆ.ಜಿ ಬೆಳ್ಳಿ ಹಾಗೂ 90 ಸಾವಿರ ರೂ. ನಗದು ಹೊಂದಿದ್ದಾರೆ.
ಉಡುಪಿ: ಅಬಕಾರಿ ಡಿವೈಎಸ್ಪಿ ಬಳಿ ವಿನೋದ್ ಕುಮಾರ್ ಬಳಿ ಮಂಗಳೂರಿನಲ್ಲಿ ಒಂದು ಮನೆ, ಒಂದು ನಿವೇಶನ, ಒಂದು ಕಾರು, ಒಂದು ಬೈಕ್, 1.175 ಕೆ.ಜಿ ಚಿನ್ನ, 1.533 ಕೆ.ಜಿ ಬೆಳ್ಳಿ, ಸುಮಾರು 4 ಲಕ್ಷ ಗೃಹಪೋಯೋಗಿ ವಸ್ತುಗಳು ಕಂಡು ಬಂದಿವೆ.
ಕೊಪ್ಪಳ: ಗಂಗಾವತಿಯ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗ ಸಹಾಯಕ ಅಭಿಯಂತರ ಪಿ.ವಿಜಯಕುಮಾರ್ ಅವರ ಬಳಿ ಹೈದರಾಬಾದ್‌ನಲ್ಲಿ 5 ಫ್ಲ್ಯಾಟ್, ಬೆಂಗಳೂರಿನಲ್ಲಿ 2 ಫ್ಲ್ಯಾಟ್, ಗಂಗಾವತಿಯಲ್ಲಿ ವಿವಿಧ ಸರ್ವೇ ನಂಬರ್‌ನಲ್ಲಿ ಒಟ್ಟು 4 ಎಕರೆ 24 ಗುಂಟೆ ಜಮೀನು, ಒಂದು ಬೈಕ್, 1.670 ಕೆ.ಜಿ ಚಿನ್ನ, ಒಂದು ರೋಲೆಕ್ಸ್ ವಾಚ್, 12.30 ಲಕ್ಷ ಗೃಹಪೋಯೋಗಿ ವಸ್ತುಗಳು ಪತ್ತೆಯಾಗಿವೆ.
ಕೋಲಾರ: ಶ್ರೀನಿವಾಸಪುರ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಸಹಾಯಕ ಅಭಿಯಂತರ ಎನ್.ಅಪ್ಪಿ ರೆಡ್ಡಿ ಬಳಿ ಶ್ರೀನಿವಾಸಪುರದಲ್ಲಿ 2 ವಾಸದ ಮನೆ, 3 ನಿವೇಶನ, ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 42 ಎಕರೆ 13 ಗುಂಟೆ ಜಮೀನು, ಒಂದು ಕಾರು, 2 ಟ್ರಾಕ್ಟರ್, 4 ಬೈಕ್, 833 ಗ್ರಾಂ ಚಿನ್ನ, 3.641 ಕೆ.ಜಿ ಬೆಳ್ಳಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ 1.88 ಲಕ್ಷ ಠೇವಣಿ, 1.95 ಲಕ್ಷ ನಗದು ಪತ್ತೆಯಾಗಿದೆ.
ತುಮಕೂರು: ಕಡೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್ಪಿ ಶಿವಕುಮಾರ್, ತುಮಕೂರು, ತಿಪಟೂರು ಪಟ್ಟಣದಲ್ಲಿ ಒಂದೊಂದು ಮನೆ, 1 ನಿರ್ಮಾಣ ಹಂತದಲ್ಲಿರುವ ಕಟ್ಟಡ, ವಿವಿಧ ಸ್ಥಳಗಳಲ್ಲಿ 5 ನಿವೇಶನ, 2 ಬೈಕ್, 1 ಕಾರು, 297 ಗ್ರಾಂ, ಚಿನ್ನ, 1.43 ಕೆ.ಜಿ. ಬೆಳ್ಳಿ, 4,925 ಲಕ್ಷ ಬ್ಯಾಂಕ್ ಠೇವಣಿ, ಅಂದಾಜು 6.5 ಲಕ್ಷ ಗೃಹ ಬಳಕೆ ವಸ್ತುಗಳು 36.92 ಲಕ್ಷ ನಗದು ಪತ್ತೆಯಾಗಿದೆ.
ರಾಮನಗರ: ಮಾಗಡಿ ಬಣವಾಡಿಯ ವೈದೈಕೀಯ ಅಧಿಕಾರಿ ಡಾ.ರಘುನಾಥ ಬಳಿ ಗಂಗಾವತಿಯ ಜಯನಗರ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಒಂದೊಂದು ಮನೆ, ವಿವಿಧ ಸರ್ವೇ ನಂಬರ್‌ಗಳಲ್ಲಿ 4 ಎಕರೆ ಜಮೀನು, ಎರಡು ಬೈಕ್, 298 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 15 ಲಕ್ಷ ಗೃಹ ಬಳಕೆ ವಸ್ತುಗಳು ಹಾೂ 2.28 ಲಕ್ಷ ನಗದು ಪತ್ತೆಯಾಗಿವೆ.
ಚಿಕ್ಕಮಗಳೂರು: ಆರ್‌ಟಿಒ ಕಚೇರಿಯ ಎಸ್‌ಡಿಎ ಕೆ.ಸಿ.ವಿರುಪಾಕ್ಷ, ಹೊಳೆನರಸೀಪುರದಲ್ಲಿ 2 ಮನೆ, ಹಾಸನ ನಗರದಲ್ಲಿ 1 ನಿವೇಶನ, ಹೊಳೇನರಸೀಪುರ ತಾಲೂಕಿನಲ್ಲಿ 3 ಎಕರೆ 20 ಗುಂಟೆ ಜಮೀನು, ಒಂದು ಕಾರು, 2 ಬೈಕ್, 173 ಗ್ರಾಂ ಚಿನ್ನ, 350 ಗ್ರಾಂ ಬೆಳ್ಳಿ, 9.5 ಲಕ್ಷ ಗೃಹ ಬಳಕೆ ವಸ್ತುಗಳು ಪತ್ತೆಯಾಗಿವೆ.
ಪ್ರಕರಣ ಸಂಬಂಧ ಎಸಿಬಿ ತನಿಖೆ ಮುಂದುವರೆದಿದ್ದು, ಒಂಬತ್ತು ಮಂದಿ ಸರಕಾರಿ ಅಧಿಕಾರಿಗಳು ಇನ್ನಷ್ಟು ಅಕ್ರಮ ಆಸ್ತಿ ಹೊಂದಿರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.