ಪಾಕ್: ಸಿಖ್ ವಿವಾಹ ನಿಯತ್ರಣ ಕಾಯ್ದೆ ಅಂಗೀಕಾರ

Update: 2018-03-14 17:07 GMT

ಇಸ್ಲಾಮಾಬಾದ್, ಮಾ. 14: ಸಿಖ್ ಅಲ್ಪಸಂಖ್ಯಾತ ಸಮುದಾಯದ ವಿವಾಹಗಳನ್ನು ನಿಯಂತ್ರಿಸುವ ಕಾನೂನೊಂದನ್ನು ಅಂಗೀಕರಿಸುವ ಮೂಲಕ ಪಾಕಿಸ್ತಾನದ ಪಂಜಾಬ್ ರಾಜ್ಯ ಬುಧವಾರ ಇತಿಹಾಸವೊಂದನ್ನು ಸೃಷ್ಟಿಸಿದೆ.

ಪಂಜಾಬ್ ಸಿಖ್ಸ್ ಆನಂದ್ ಕರಾಜ್ ವಿವಾಹಗಳ ಕಾಯ್ದೆ 2018ನ್ನು ಮೊದಲು ಶಾಸಕ ಸರ್ದಾರ್ ರಮೇಶ್ ಸಿಂಗ್ ಅರೋರ 2017 ಅಕ್ಟೋಬರ್‌ನಲ್ಲಿ ಮಂಡಿಸಿದರು. ಮುಖ್ಯಮಂತ್ರಿ ಶೆಹ್ಬಾಝ್ ಶರೀಫ್ ಮತ್ತು ಆಡಳಿತ ಮತ್ತು ಪ್ರತಿಪಕ್ಷಗಳ ಇತರ ಸದಸ್ಯರ ಬೆಂಬಲ ಪಡೆದ ಬಳಿಕ, ಮಸೂದೆಯು ವಿಧಾನಸಭೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News