ಅನಧಿಕೃತ ವಲಸಿಗರು ವಾಪಸ್: ಐರೋಪ್ಯ ಒಕ್ಕೂಟ

Update: 2018-03-14 17:18 GMT

ಬ್ರಸೆಲ್ಸ್ (ಬೆಲ್ಜಿಯಂ), ಮಾ. 14: ಅನಧಿಕೃತ ವಲಸಿಗರ ವಾಪಸಾತಿಯನ್ನು ಕ್ಷಿಪ್ರಗೊಳಿಸುವ ಪ್ರಕ್ರಿಯೆಗೆ ಐರೋಪ್ಯ ಒಕ್ಕೂಟ ಬುಧವಾರ ಚಾಲನೆ ನೀಡಿದೆ.

ತಮ್ಮ ರಾಷ್ಟ್ರೀಯರನ್ನು ಹಿಂದಕ್ಕೆ ಪಡೆಯಲು ದೇಶಗಳು ನಿರಾಕರಿಸಿದರೆ, ಅವುಗಳ ರಾಜತಾಂತ್ರಿಕರ ವೀಸಾಗಳನ್ನು ನಿರ್ಬಂಧಿಸುವ ಮೂಲಕ ಅವುಗಳನ್ನು ಶಿಕ್ಷಿಸುವ ಯೋಜನೆಗಳನ್ನು ಅದು ಪ್ರಕಟಿಸಿದೆ.

ವೀಸಾ ನಿರಾಕರಿಸಲ್ಪಟ್ಟ ಸುಮಾರು ಅರ್ಧದಷ್ಟು ವಲಸಿಗರನ್ನು ವಾಪಸ್ ಕಳುಹಿಸಲು ಒಕ್ಕೂಟ ನಿರ್ಧರಿಸಿದೆ. ಈ ವಲಸಿಗರು ಯಾವುದೇ ಗುರುತು ಚೀಟಿಗಳನ್ನು ಹೊಂದದೆ ಇರುವುದರಿಂದ ಅವರ ರಾಷ್ಟ್ರೀಯತೆಯನ್ನು ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News