ಅಮೆರಿಕದ ಬೀದಿಯಲ್ಲಿ ಅಲೆಯುತ್ತಿದ್ದ ನೊಬೆಲ್ ಪುರಸ್ಕೃತ ವಿಜ್ಞಾನಿ: ಪತ್ನಿಯ ಮೃತದೇಹ ತ್ಯಾಜ್ಯಗುಂಡಿಯಲ್ಲಿ ಪತ್ತೆ!

Update: 2018-03-15 08:04 GMT

ನ್ಯೂಯಾರ್ಕ್, ಮಾ.15: ಜಪಾನ್ ದೇಶದ ನೊಬೆಲ್ ಪಾರಿತೋಷಕ ವಿಜೇತ ರಸಾಯನಶಾಸ್ತ್ರಜ್ಞ ಹಾಗೂ ವಿಜ್ಞಾನಿ 82 ವರ್ಷದ ಈ-ಇಚಿ-ನೆಗಿಶಿ ಅವರು ಉತ್ತರ ಇಲ್ಲಿನೊಯಿಸ್ ನ ಗ್ರಾಮೀಣ ಪ್ರದೇಶವಾದ ರಾಕ್‍ಫೋರ್ಡ್ ಎಂಬಲ್ಲಿ ಬುಧವಾರ ಬೆಳಗ್ಗೆ 5 ಗಂಟೆಗೆ ಅಲೆಯುತ್ತಿರುವುದು ಕಂಡು ಬಂದರೆ ಅವರ ಪತ್ನಿಯ ಮೃತದೇಹ ಅಲ್ಲಿಯೇ ಹತ್ತಿರದಲ್ಲಿ ಪತ್ತೆಯಾಗಿದೆ. ಇಬ್ಬರೂ ಅಲ್ಲಿಂದ ಸುಮಾರು 200 ಮೈಲಿಗಳಷ್ಟು ದೂರದಲ್ಲಿರುವ ತಮ್ಮ ಮನೆಯಿಂದ  ನಾಪತ್ತೆಯಾಗಿ 9 ಗಂಟೆಗಳಾದ ನಂತರ ಈ ಬೆಳವಣಿಗೆ ನಡೆದಿದೆ.

ನೆಗಿಶಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪೊಲೀಸರು ದಂಪತಿಯ ಕಾರನ್ನೂ ಹತ್ತಿರದಲ್ಲಿಯೇ ಪತ್ತೆ ಹಚ್ಚಿದ್ದಾರೆ. ವಿಜ್ಞಾನಿಯ ಪತ್ನಿ ಸುಮಿರೆ ನೆಗಿಶಿ ಅವರ ಮೃತದೇಹ ಆರ್ಚರ್ಡ್ ಹಿಲ್ಸ್ ತ್ಯಾಜ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.  ದಂಪತಿ ಪತ್ತೆಯಾದ ಸ್ಥಳ ಚಿಕಾಗೋದಿಂದ ನೂರು ಮೈಲಿಗಳಾಚೆ ಇದೆ.

ಸುಮಿರೆ ಅವರ ಸಾವಿನ ಕುರಿತಂತೆ ಪೊಲೀಸರಿಗೆ ಯಾರ ಮೇಲೂ ಶಂಕೆಯಿಲ್ಲವೆನ್ನಲಾಗಿದೆ. ಪೋಸ್ಟ್ ಮಾರ್ಟಂ ವರದಿ ಇನ್ನಷ್ಟೇ ಬರಬೇಕಿದೆ. ವಿಜ್ಞಾನಿ ನೆಗಿಶಿ ಅವರ ಪರಿಸ್ಥಿತಿಯ ಬಗ್ಗೆಯೂ ಮಾಹಿತಿಯಿಲ್ಲ

ದಂಪತಿಯ  ಮನೆ ವೆಸ್ಟ್ ಲಫೆಯೆಟ್ಟ್ ಪ್ರದೇಶದಲ್ಲಿದ್ದು ನೆಗಿಶಿ ಅವರು ರಸಾಯನ ಶಾಸ್ತ್ರ ಪ್ರೊಫೆಸರ್ ಆಗಿರುವ ಪಡ್ರ್ಯೂ ವಿಶ್ವವಿದ್ಯಾಲಯದ ಕ್ಯಾಂಪಸ್ ಪಕ್ಕದಲ್ಲಿಯೇ ಅವರ ನಿವಾಸವಿದೆ. ಅವರು 2010ರಲ್ಲಿ ನೋಬೆಲ್ ಪಾರಿತೋಷಕ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News