ಭಾರತ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್ ಕೈ ಮೂಳೆ ಮುರಿತ

Update: 2018-03-16 13:28 GMT

ಹೊಸದಿಲ್ಲಿ, ಮಾ.16: ಭಾರತದ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್ ಬಾತ್ ಟಬ್ ನಲ್ಲಿ ಜಾರಿದ ಪರಿಣಾಮ ಅವರ ಕೈ ಮೂಳೆ ಮುರಿತಕ್ಕೊಳಗಾಗಿದೆ ಎನ್ನಲಾಗಿದೆ. ವಿಲಾಸಿ ಹೊಟೇಲೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ

ಭಾರತದ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್ ರಾಜಸ್ಥಾನದ ಉಮೈದ್ ಭವನ್ ನಲ್ಲಿ ತಂಗಿದ್ದರು. “ಸಿಟಿ ಸ್ಕ್ಯಾನ್ ಹಾಗು ಎಕ್ಸ್ ರೇ ಮಾಡಲಾಗಿದ್ದು, ಕೈ ಮೂಳೆಯಲ್ಲಿ ಸಣ್ಣ ಮುರಿತ ಉಂಟಾಗಿದೆ. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ” ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News