ಲೋಕಾಯುಕ್ತರ ಕೊಲೆ ಯತ್ನ ಪ್ರಕರಣ: ಆರೋಪಿ ತೇಜ್‌ರಾಜ್ ಶರ್ಮಾ ನ್ಯಾಯಾಂಗ ಬಂಧನ ವಿಸ್ತರಣೆ
Update: 2018-03-16 20:29 IST
ಬೆಂಗಳೂರು, ಮಾ.16: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ ಆರೋಪಿ ತೇಜ್‌ರಾಜ್ ಶರ್ಮಾನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ತೇಜ್‌ರಾಜ್ ಶೆಟ್ಟಿಯ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ನ್ಯಾಯಾಧೀಶ ಮಹೇಶ್ ಮುಂದೆ ಹಾಜರುಪಡಿಸಿದರು.
ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ನೀಡಿದ್ದಾರೆ. ಈ ನಡುವೆ ತೇಜ್‌ರಾಜ್ ಶರ್ಮಾನ ರಕ್ತದ ಮಾದರಿಯನ್ನು ಪಡೆದಿರುವ ಪೊಲೀಸರು ಅದನ್ನು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಈಗಾಗಲೇ ಡಾ. ಸತೀಶ್ ನೇತತ್ವದ ತಂಡ ಪರೀಕ್ಷೆ ನಡೆಸಿದ್ದು, ಆರೋಪಿಯ ಕೈಬರಹವನ್ನು ಬಿಳಿ ಹಾಳೆ ಮೇಲೆ ಬರೆಸಿಕೊಂಡು ನ್ಯಾಯಮೂರ್ತಿಗಳ ಒಪ್ಪಿಗೆ ಪಡೆದು ಸಂಗ್ರಹಿಸಲಾಗಿದೆ.