×
Ad

ಬೆಂಗಳೂರು: ಐಐಎಸ್ಸಿ ಕೋರ್ಟ್ ಅಧ್ಯಕ್ಷರಾಗಿ ಎನ್.ಚಂದ್ರಶೇಖರನ್ ಆಯ್ಕೆ

Update: 2018-03-16 20:53 IST

ಬೆಂಗಳೂರು, ಮಾ.16: ಟಾಟಾ ಸನ್ಸ್ ಸಮೂಹದ ಅಧ್ಯಕ್ಷ ಎನ್.ಚಂದ್ರಶೇಖರನ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಕೋರ್ಟ್‌ನ ಅಧ್ಯಕ್ಷರಾಗಿ 2018-2021ರ ಅವಧಿಗೆ ಶುಕ್ರವಾರ ಆಯ್ಕೆಯಾದರು.

ಐಐಎಸ್ಸಿಯ ಹಿರಿಯ ಶಿಕ್ಷಣವೆತ್ತರು, ಭಾರತ ಸರಕಾರ, ಕರ್ನಾಟಕ ಸರಕಾರ, ಉದ್ಯಮ ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಐಐಎಸ್ಸಿ ಕೋರ್ಟ್‌ನ ಸದಸ್ಯರಾಗಿರುತ್ತಾರೆ.

ಚಂದ್ರಶೇಖರನ್ ಐಐಎಸ್ಸಿ ಕೋರ್ಟ್‌ನ 8ನೇ ಅಧ್ಯಕ್ಷರಾಗಿದ್ದು, ಇಂದು ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ಅವರದಿಂದ ಅಧಿಕಾರ ಸ್ವೀಕರಿಸಿದರು. ಈ ಮೊದಲು ಸರ್.ಎಂ.ವಿಶ್ವೇಶ್ವರಯ್ಯ, ಜೆ.ಆರ್.ಡಿ.ಟಾಟಾ, ರತನ್‌ಟಾಟಾ ಸೇರಿದಂತೆ ಇನ್ನಿತರ ಗಣ್ಯರು ಐಐಎಸ್ಸಿ ಕೋರ್ಟ್‌ನ ಅಧ್ಯಕ್ಷರಾಗಿದ್ದರು ಎಂದು ಐಐಎಸ್ಸಿಯ ಸಹಾಯಕ ಕುಲಸಚಿವ(ಸಾರ್ವಜನಿಕ ಸಂಪರ್ಕ)ರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News