ಸೈಬರ್ ಕ್ರೈಂ ಕಾಯ್ದೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ: ರೋಷನ್ ಬೋರಾ

Update: 2018-03-17 15:35 GMT

ಬೆಂಗಳೂರು, ಮಾ.17: ಸೈಬರ್ ಕ್ರೈಂ ಕಾಯ್ದೆ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಇದರಿಂದ ಸ್ಟಾರ್ಟಪ್ ಹಾಗೂ ಸಣ್ಣ ಕಂಪನಿಗಳು ನಷ್ಟಕ್ಕೆ ಒಳಗಾಗುತ್ತಿವೆ ಎಂದು ಸಾಪ್ಟ್‌ವೇರ್ ಉದ್ಯಮಿ ರೋಷನ್ ಬೋರಾ ತಿಳಿಸಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನವೋದ್ಯಮಗಳು ಕಷ್ಟ ಪಟ್ಟು ಹೊಸ ತಂತ್ರಜ್ಞಾನವನ್ನು ರೂಪಿಸಿ ಕಂಪನಿಗಳು ಆರಂಭಿಸುತ್ತಾರೆ. ಆದರೆ, ಅಲ್ಲಿ ಕೆಲಸಕ್ಕೆ ಸೇರಿದ ಉದ್ಯೋಗಿಗಳ ತಂತ್ರಜ್ಞಾನವನ್ನು ಕಳ್ಳತನ ಮಾಡಿ ಮತ್ತೆ ಅದನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನವೋದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಇದಕ್ಕೆ ಮುಖ್ಯ ಕಾರಣ ಸೈಬರ್ ಕ್ರೈಂ ಕಾಯ್ದೆ ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳದಿರುವುದಾಗಿದೆ ಎಂದರು.

ಇನ್ನು ಈ ರೀತಿ ಪ್ರಕರಣಗಳು ನಡೆದ ಸಂದರ್ಭದಲ್ಲಿ ಎಲ್ಲಿ ದೂರು ನೀಡಬೇಕು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇಲ್ಲದಾಗಿದೆ. ಇಡೀ ಬೆಂಗಳೂರಿಗೆ ಒಂದೇ ಒಂದು ಸೈಬರ್ ಕ್ರೈಂ ಪೊಲೀಸ್ ಠಾಣಿ ಇದೆ. ಕೊನೆಯ ಪಕ್ಷ ಪ್ರತಿ ಜಿಲ್ಲಾ ಸಹಾಯಕ ವಿಭಾಗಧಿಕಾರಿ ಕಚೇರಿಯಲ್ಲಿ ಠಾಣೆ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News