ಹಿಟ್ಲರ್-ಮುಸೊಲೋನಿ ಹೋರಾಟದ ಒಪ್ಪಂದ

Update: 2018-03-17 18:49 GMT

1937: ಅಮೆರಿಕ ಟೆಕ್ಸಾಸ್‌ನ ನ್ಯೂ ಲಂಡನ್‌ನ ಶಾಲೆಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿ 400ಕ್ಕಿಂತ ಅಧಿಕ ಜನ ಬಲಿಯಾದ ವರದಿಯಾಗಿತ್ತು.

1940: ಜರ್ಮನಿ ಹಾಗೂ ಇಟಲಿಯ ಸರ್ವಾಧಿಕಾರಿಗಳಾದ ಕ್ರಮವಾಗಿ ಅಡಾಲ್ಫ್ ಹಿಟ್ಲರ್ ಹಾಗೂ ಮುಸೋಲೋನಿ ಬ್ರೆನರ್ ಪಾಸ್ ಎಂಬಲ್ಲಿ ಭೇಟಿಯಾಗಿ ಎರಡನೇ ವಿಶ್ವ ಮಹಾಯುದ್ಧದಲ್ಲಿ ಫ್ರಾನ್ಸ್ ಹಾಗೂ ಇಂಗ್ಲೆಂಡ್ ವಿರುದ್ಧ ಒಟ್ಟಾಗಿ ಹೋರಾಡುವ ಒಪ್ಪಂದ ಮಾಡಿಕೊಂಡರು.

1953: ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸುಮಾರು 250 ಜನರು ಬಲಿಯಾದ ವರದಿಯಾಗಿದೆ.

1965: ಅಂತರಿಕ್ಷದಲ್ಲಿ ಪ್ರಥಮ ಬಾರಿ ನಡೆದಾಡಿದ ಕೀರ್ತಿ ರಶ್ಯಾದ ಗಗನಯಾತ್ರಿ ಲೆ.ಕರ್ನಲ್ ಅಲೆಕ್ಸಿ ಲಿಯೊನೊವ್ ಎಂಬವರ ಪಾಲಾಯಿತು. ರಶ್ಯಾದ ವೊಸ್ಕಾಡ್ ಎಂಬ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದ ಅವರು ಕೆಲವು ನಿಮಿಷಗಳ ಅವಧಿಗೆ ತಿರುಗಾಡಿದ ಅನುಭವ ಪಡೆದರು.

1989: ಈಜಿಪ್ಟ್‌ನ ಚಿಯೋಪ್ಸ್ ಪಿರಾಮಿಡ್‌ನಲ್ಲಿ ಸುಮಾರು 4,400 ವರ್ಷಗಳ ಹಿಂದಿನ ಮಮ್ಮಿಯೊಂದು ಪತ್ತೆಯಾಯಿತು.

1996: ಫಿಲಿಪೀನ್ಸ್‌ನ ಕ್ವೆಝಾನ್ ನಗರದ ನೈಟ್‌ಕ್ಲಬ್‌ವೊಂದಕ್ಕೆ ಬೆಂಕಿ ಬಿದ್ದು 162 ಜನರು ಮೃತಪಟ್ಟ ವರದಿಯಾಗಿತ್ತು.

1997: ರಶ್ಯಾದ ಎಎನ್-24 ಎಂಬ ವಿಮಾನವು ಟರ್ಕಿಯಲ್ಲಿ ಪತನಗೊಂಡ ಪರಿಣಾಮ ಸುಮಾರು 50 ಜನರು ಅಸುನೀಗಿದರು.

2011: ನಾಸಾ ಕಳುಹಿಸಿದ್ದ ಬಾಹ್ಯಾಕಾಶ ನೌಕೆ ಮೆಸೆಂಜರ್ ಈ ದಿನ ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿತು.

2013: ಇರಾಕ್‌ನಲ್ಲಿ ನಡೆದ ಸರಣಿ ಬಾಂಬ್ ದಾಳಿಗಳಿಗೆ ಸುಮಾರು 48 ಜನರು ಮೃತಪಟ್ಟು, 248ಕ್ಕೂ ಹೆಚ್ಚು ಜನ ಗಾಯಗೊಂಡರು.

2014: ವಾಶಿಂಗ್ಟನ್‌ನಲ್ಲಿದ್ದ ಸಿರಿಯದ ರಾಯಭಾರ ಕಚೇರಿಯನ್ನು ಅಮೆರಿಕ ಮುಚ್ಚಿತು. ಅಲ್ಲದೆ ಅಲ್ಲಿದ್ದ ಸಿರಿಯದ ಎಲ್ಲ ರಾಯಭಾರಿಗಳನ್ನು ಹೊರ ಹಾಕಿತು.

1938: ಬಾಲಿವುಡ್‌ನ ಖ್ಯಾತ ನಟ ದಿ. ಶಶಿ ಕಪೂರ್ ಅವರ ಜನ್ಮದಿನ ಇಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ