×
Ad

ಪ್ರಭಾರಿ ಕುಲಪತಿಯಾಗಿ ಪ್ರೊ.ಶಿವಕುಮಾರ್ ನೇಮಕ

Update: 2018-03-19 20:08 IST

ಬೆಂಗಳೂರು, ಮಾ.19: ಬೆಂಗಳೂರು ವಿವಿಯ ವಿಜ್ಞಾನ ವಿಭಾಗದ ಡೀನ್ ಹಾಗೂ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಐ.ಎಸ್.ಶಿವಕುಮಾರ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳನ್ನಾಗಿ ರಾಜ್ಯಪಾಲರು ನೇಮಕ ಮಾಡಿ ಆದೇಶಿಸಿದ್ದಾರೆ.

ವಿಶ್ವವಿದ್ಯಾಲಯದ ನಿರ್ಗಮಿತ ಪ್ರಭಾರಿ ಕುಲಪತಿ ಪ್ರೊ.ಸುದೇಶ್ ನೂತನವಾಗಿ ಪ್ರಭಾರ ಕುಲಪತಿಯಾಗಿ ನೇಮಕವಾದ ಶಿವಕುಮಾರ್‌ಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಕುಲಸಚಿವ(ಮೌಲ್ಯಮಾಪನ) ಪ್ರೊ.ಸಿ.ಶಿವರಾಜು, ಕುಲಸಚಿವ ಪ್ರೊ.ಬಿ.ಕೆ.ರವಿ, ವಿತ್ತಾಧಿಕಾರಿ ಡಾ.ಎ.ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News