ತಮಿಳುನಾಡಿನತ್ತ ರಾಮ ರಾಜ್ಯ ರಥಯಾತ್ರೆ: ಗಡಿಯಲ್ಲಿ ಉದ್ವಿಗ್ನ ಸ್ಥಿತಿ

Update: 2018-03-20 07:32 GMT

ಚೆನ್ನೈ, ಮಾ,20: ರಾಮ ರಾಜ್ಯ ರಥಯಾತ್ರೆ ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಕೇರಳ-ತಮಿಳುನಾಡು ಗಡಿಭಾಗವಾದ ಕೊಟ್ಟೈವಾಸಲ್ ನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತಿರುನಲ್ವೇಲಿ ಜಿಲ್ಲೆಯಿಂದ ಗಡಿ ದಾಟಲಿರುವ ಯಾತ್ರೆಯ ಭದ್ರತೆಗೆ ತಮಿಳುನಾಡು ಹಾಗು ಕೇರಳದ ನೂರಕ್ಕೂ ಅಧಿಕ ಪೊಲೀಸ್ ಪೊಲೀಸರು ಜಮಾಯಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹಾಗು ಆರೆಸ್ಸೆಸ್ ನ 200ಕ್ಕೂ ಅಧಿಕ ಕಾರ್ಯಕರ್ತರು ಬೈಕ್ ರ್ಯಾಲಿಗೆ ಸಿದ್ಧತೆ ನಡೆಸುತ್ತಿದ್ದಾರೆ. ತಿರುವನಂತಪುರಂನ ಶ್ರೀ ರಾಮ ಆಶ್ರಮದ ಮುಖ್ಯಸ್ಥ ಶ್ರೀ ಶಕ್ರಿ ಸಂತಾನಂದ ಯಾತ್ರೆಯ ನೇತೃತ್ವ ವಹಿಸಿದ್ದಾರೆ.

ತಿರುನಲ್ವೇಲಿಯ ಪುಳಿಯಾರೈ ಪ್ರವೇಶಿಸಿರುವ ಯಾತ್ರೆಗೆ ದ್ರಾವಿಡ ಸಂಘಟನೆಗಳಿಂದ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ತಮಿಳುನಾಡಿನಲ್ಲಿ ಆತಂಕದ ಸ್ಥಿತಿ ನಿರ್ಮಾಣಕ್ಕೆ ಕಾರಣವಾದ ಸಂಘಪರಿವಾರ ಸಂಘಟನೆಗಳ ವಿರುದ್ಧ ರಾಜ್ಯದ ಹಲವು ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News