ಶ್ರೀಲಂಕಾದ ಮಾಜಿ ಅಧ್ಯಕ್ಷನ ಪುತ್ರನಿಗೆ ರಶ್ಯದಿಂದ ಅಮೆರಿಕ ಪ್ರವೇಶಕ್ಕೆ ನಿರ್ಬಂಧ

Update: 2018-03-22 07:33 GMT

ಚೆನ್ನೈ, ಮಾ.22: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಪುತ್ರ, ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸಗೆ ರಶ್ಯದಿಂದ ಅಮೆರಿಕ ಪ್ರವೇಶಿಸಲು ನಿರಾಕರಿಸಿರುವ ಘಟನೆ ನಡೆದಿದೆ.

ನಮಲ್ ರಶ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ವೀಕ್ಷಕರಾಗಿ ಮಾಸ್ಕೊಗೆ ತೆರಳಿದ್ದರು. ರಶ್ಯದಲ್ಲಿ ಹಲವು ಅಧಿಕೃತ ಸಭೆಗಳಲ್ಲಿ ಭಾಗವಹಿಸಿದ್ದರು.

ಅಮೆರಿಕ ಗೃಹ ವ್ಯವಹಾರ ಇಲಾಖೆಯು ಯಾವುದೇ ಸ್ಪಷ್ಟ ಕಾರಣ ನೀಡದೇ ನಮಲ್‌ಗೆ ಮಾಸ್ಕೊದಿಂದ ಹೂಸ್ಟನ್ ವಿಮಾನ ಏರದಂತೆ ಸೂಚನೆ ನೀಡಿದೆ. ಮಾಸ್ಕೊ ಹಾಗೂ ಕೊಲಂಬೊದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಈ ಕುರಿತು ವಿವರಣೆಯನ್ನು ನೀಡಿಲ್ಲ’’ ಎಂದು ನಮಲ್ ಕಚೇರಿ ಮೂಲಗಳು ತಿಳಿಸಿವೆ.

ಎಮಿರೇಟ್ಸ್ ಏರ್ ಮಾಸ್ಕೊ, ತನಗೆ ಹೂಸ್ಟನ್ ವಿಮಾನ ಏರದಂತೆ ಅಮೆರಿಕದ ಅಧಿಕಾರಿಗಳು ಸೂಚನೆ ನೀಡಿದ್ದಾಗಿ ತಿಳಿಸಿದರು. ಇದಕ್ಕೆ ಕಾರಣ ಏನೆಂದು ಗೊತ್ತಾಗಿಲ್ಲ. ನಾನು ರಶ್ಯಕ್ಕೆ ಹೋಗಿರುವುದಕ್ಕೆ ಹೀಗೆ ಮಾಡಲಾಗಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ನಮಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News