ಹೊಸ ಮೈಲುಗಲ್ಲು ತಲುಪಿದ ಇಂಗ್ಲೆಂಡ್ ಬೌಲರ್ ಬ್ರಾಡ್

Update: 2018-03-22 12:22 GMT

ಆಕ್ಲೆಂಡ್, ಮಾ.22: ನ್ಯೂಝಿಲೆಂಡ್ ವಿರುದ್ಧ ಗುರುವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಮ್ ಲಥಾಮ್ ವಿಕೆಟ್ ಕಬಳಿಸಿದ ಸ್ಟುವರ್ಟ್ ಬ್ರಾಡ್ 400 ಟೆಸ್ಟ್ ವಿಕೆಟ್ ಮೈಲುಗಲ್ಲು ತಲುಪಿದ ಇಂಗ್ಲೆಂಡ್‌ನ ಎರಡನೇ ಹಾಗೂ ವಿಶ್ವದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ.

ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ 31ರ ಹರೆಯದ ಬ್ರಾಡ್ 400 ವಿಕೆಟ್ ಪೂರೈಸಿದ ತಕ್ಷಣ ಸಹ ಆಟಗಾರರು ಅವರನ್ನು ಸುತ್ತುವರಿದು ಅಭಿನಂದಿಸಿದರು.

 ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 58 ರನ್ ಗಳಿಸಿ ಆಲೌಟಾಯಿತು. 115ನೇ ಟೆಸ್ಟ್ ಪಂದ್ಯ ಆಡಿದ ಬ್ರಾಡ್‌ಗೆ 400 ವಿಕೆಟ್ ಪೂರೈಸಲು ಕೇವಲ ಒಂದು ವಿಕೆಟ್ ಅಗತ್ಯವಿತ್ತು. ನ್ಯೂಝಿಲೆಂಡ್ ಇನಿಂಗ್ಸ್ ಆರಂಭದಲ್ಲಿ ಜೀತ್ ರಾವಲ್ ವಿಕೆಟ್ ಪಡೆಯುವ ಮೂಲಕ ಬ್ರಾಡ್ 400 ವಿಕೆಟ್ ಪೂರೈಸುವ ಅವಕಾಶ ಕೈತಪ್ಪಿತು. ಬ್ರಾಡ್ ಬೌಲಿಂಗ್‌ನಲ್ಲಿ ರಾವಲ್‌ನಲ್ಲಿ ನೀಡಿದ ಕ್ಯಾಚ್‌ನ್ನು ನಾಯಕ ಜೋ ರೂಟ್ ಕೈಚೆಲ್ಲಿದರು.

134 ಪಂದ್ಯಗಳಲ್ಲಿ 523 ವಿಕೆಟ್‌ಗಳನ್ನು ಪಡೆದಿರುವ ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್ ಆಗಿದ್ದಾರೆ.

► ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಟೆಸ್ಟ್ ಬೌಲರ್‌ಗಳು

ಆಟಗಾರ                       ವಿಕೆಟ್

ಜೇಮ್ಸ್ ಆ್ಯಂಡರ್ಸನ್           523

ಸ್ಟುವರ್ಟ್ ಬ್ರಾಡ್               400

ಇಯಾನ್ ಬೋಥಮ್          383

ಬಾಬ್ ವಿಲ್ಲಿಸ್                  325

ಫ್ರೆಡ್ ಟ್ರುಮ್ಯಾನ್              307

► ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಟೆಸ್ಟ್ ಬೌಲರ್‌ಗಳು

ಆಟಗಾರ            ದೇಶ              ವಿಕೆಟ್

ಮುರಳೀಧರನ್     ಶ್ರೀಲಂಕಾ         800

ಶೇನ್ ವಾರ್ನ್‌      ಆಸ್ಟ್ರೇಲಿಯ       708

ಅನಿಲ್ ಕುಂಬ್ಳೆ      ಭಾರತ           619

ಮೆಕ್‌ಗ್ರಾತ್‌         ಆಸ್ಟ್ರೇಲಿಯ       563

ಆ್ಯಂಡರ್ಸನ್‌        ಇಂಗ್ಲೆಂಡ್         523

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News