ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೊದಲು ತಪ್ಪೊಪ್ಪಿಗೆ ವಿಡಿಯೋ ಮಾಡಿದ ಬಾಂಬರ್

Update: 2018-03-22 17:41 GMT
ಮಾರ್ಕ್ ಕಾಂಡಿಟ್

ಆಸ್ಟಿನ್ (ಅಮೆರಿಕ), ಮಾ. 22: ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್‌ನಲ್ಲಿ ಸರಣಿ ಪಾರ್ಸೆಲ್ ಬಾಂಬ್‌ಗಳ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ್ದ ವ್ಯಕ್ತಿಯು, ಬುಧವಾರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮುನ್ನ ಮೊಬೈಲ್ ಫೋನ್‌ನಲ್ಲಿ ಮಾಡಲಾದ ವೀಡಿಯೊವೊಂದರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ಬಾಂಬರ್‌ನನ್ನು ಆಸ್ಟಿನ್ ಉಪನಗರ ಪಫ್ಲುಜ್‌ವಿಲ್ ನಿವಾಸಿ 23 ವರ್ಷದ ನಿರುದ್ಯೋಗಿ ಮಾರ್ಕ್ ಕಾಂಡಿಟ್ ಎಂಬುದಾಗಿ ಗುರುತಿಸಲಾಗಿದೆ.

ಕಾರಿನಲ್ಲಿ ಕುಳಿತಿದ್ದ ಅವನನ್ನು ಪೊಲೀಸರು ಬಂಧಿಸಲು ಮುಂದಾದಾಗ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದನು.

ಲೆಕ್ಕಕ್ಕೆ ಸಿಕ್ಕಿರುವ ಎಲ್ಲ 7 ಬಾಂಬ್‌ಗಳನ್ನು ತಾನು ಹೇಗೆ ನಿರ್ಮಿಸಿದೆ ಎಂಬ ಬಗ್ಗೆ ಅವನು ತನ್ನ ವೀಡಿಯೊದಲ್ಲಿ ಮಾಹಿತಿ ನೀಡಿದ್ದಾನೆ.

ಈ 7 ಬಾಂಬ್‌ಗಳ ಪೈಕಿ 5 ಸ್ಫೋಟಿಸಿವೆ, ಒಂದನ್ನು ಸ್ಫೋಟಿಸುವ ಮುನ್ನವೇ ವಶಪಡಿಸಿಕೊಳ್ಳಲಾಗಿದೆ ಹಾಗೂ 7ನೇ ಬಾಂಬನ್ನು ಸ್ಫೋಟಿಸಿಕೊಂಡು ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆದರೆ, ಕಳೆದ ಮೂರು ವಾರಗಳಿಂದ ನಡೆಸಿಕೊಂಡು ಬಂದಿರುವ ಬಾಂಬ್ ದಾಳಿಗಳ ಸರಿಯಾದ ಉದ್ದೇಶವನ್ನು ಅವನು ತಿಳಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News