ಗೋವಾಕ್ಕಿಂತ ಮಹಾರಾಷ್ಟ್ರ, ಕರ್ನಾಟಕದ ಬೀಚ್‌ಗಳಲ್ಲಿ ಅತಿ ಹೆಚ್ಚು ಮೈಕ್ರೋಪ್ಲಾಸ್ಟಿಕ್ಸ್: ಅಧ್ಯಯನ

Update: 2018-03-22 17:47 GMT

ಪಣಜಿ, ಮಾ. 22: ಸಮುದ್ರ ಪರಿಸರವನ್ನು ಮಲೀನ ಮಾಡುವ ಮೈಕ್ರೊಪ್ರಾಸ್ಟಿಕ್‌ಗಳು ಗೋವಾಕ್ಕೆ ಹೋಲಿಸಿದರೆ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಬೀಚ್‌ಗಳಲ್ಲೇ ಹೆಚ್ಚು ಕಂಡುಬರುತ್ತಿವೆ ಎಂದು ವೈಜ್ಞಾನಿಕ ಅಧ್ಯಯನವೊಂದು ತಿಳಿಸಿದೆ.

ಮೈಕ್ರೊಪ್ಲಾಸ್ಟಿಕ್ ಅಂದರೆ ಪರಿಸರದಲ್ಲಿರುವ ಅತ್ಯಂತ ಸಣ್ಣ ಪ್ಲಾಸ್ಟಿಕ್ ತುಂಡುಗಳ ದಿಬ್ಬ. ಗ್ರಾಹಕರ ಉತ್ಪಾದನೆ ಹಾಗೂ ಕೈಗಾರಿಕೆ ತ್ಯಾಜ್ಯದಿಂದ ಈ ಮೈಕ್ರೊಪ್ಲಾಸ್ಟಿಕ್ಸ್‌ಗಳು ಉತ್ಪತ್ತಿಯಾಗುತ್ತದೆ ಎಂದು ಅದು ಹೇಳಿದೆ.

ಈ ಅಧ್ಯಯನವನ್ನು ಮಹಾರಾಷ್ಟ್ರ ಗೋವಾ ಹಾಗೂ ಕರ್ನಾಟಕದ ಕಡಲ ತೀರದಲ್ಲಿ ನಡೆಸಲಾಗಿದೆ. ಮೂರು ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಮೈಕ್ರೊಪ್ಲಾಸ್ಟಿಕ್ಸ್ ಮಾಲಿನ್ಯದ ವಿತರಣೆಯಲ್ಲಿ ಪ್ರಮುಖ ವ್ಯತ್ಯಾಸವನ್ನು ಕೂಡ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಪಿಲ್ಮ್ಸ್, ಫೈಬರ್, ತುಣುಕು, ಉಂಡೆಯಂತಹ ಮೈಕ್ರೊಪ್ಲಾಸ್ಟಿಕ್ಸ್‌ಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೀಚ್‌ಗಳಳ್ಲಿ ಹೇರಳವಾಗಿ ಪತ್ತೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News