ಸಮುದ್ರ ತೀರಕ್ಕೆ ಬಂದ 150 ತಿಮಿಂಗಿಲಗಳು!

Update: 2018-03-23 17:05 GMT

ಪರ್ತ್ (ಆಸ್ಟ್ರೇಲಿಯ), ಮಾ. 23: ಪಶ್ಚಿಮ ಆಸ್ಟ್ರೇಲಿಯದ ಹ್ಯಾಮಲಿನ್ ಬೇ ಎಂಬಲ್ಲಿ 150ಕ್ಕೂ ಅಧಿಕ ತಿಮಿಂಗಿಲಗಳು ಸಮುದ್ರ ತೀರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಆ ಪೈಕಿ ಶುಕ್ರವಾರದ ವೇಳೆಗೆ ಕೇವಲ 15 ಮಾತ್ರ ಜೀವಂತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇವುಗಳನ್ನು ಚಿಕ್ಕ ಈಜುರೆಕ್ಕೆಗಳುಳ್ಳ ಪೈಲಟ್ ತಿಮಿಂಗಿಲಗಳು ಎಂಬುದಾಗಿ ಗುರುತಿಸಲಾಗಿದೆ.

ಸಿಕ್ಕಿಹಾಕಿಕೊಂಡಿರುವ ತಿಮಿಂಗಿಲಗಳನ್ನು ಶುಕ್ರವಾರ ಬೆಳಗ್ಗೆ ಮೊದಲು ನೋಡಿದವರು ಮೀನುಗಾರರು.

ಶುಕ್ರವಾರ ಮಧ್ಯಾಹ್ನದ ವೇಳೆಗೆ ಅವುಗಳ ಪೈಕಿ ಕೇವಲ 15 ತಿಮಿಂಗಿಲಗಳು ಜೀವಂತವಾಗಿವೆ.

ಅವುಗಳನ್ನು ಸಮುದ್ರದತ್ತ ನೂಕುವ ರಕ್ಷಣಾ ಕಾರ್ಯ ಸಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News