ತಾಲಿಬಾನ್‌ಗೆ ರಶ್ಯದಿಂದ ಶಸ್ತ್ರಾಸ್ತ್ರಗಳ ಪೂರೈಕೆ: ಅಮೆರಿಕ ಸೇನಾಧಿಕಾರಿ ಆರೋಪ

Update: 2018-03-24 16:27 GMT

ಕಾಬೂಲ್, ಮಾ. 24: ರಶ್ಯ ತಾಲಿಬಾನ್‌ಗೆ ಬೆಂಬಲ ನೀಡುತ್ತಿದೆ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳ ಮುಖ್ಯಸ್ಥ ಜನರಲ್ ಜಾನ್ ನಿಕೋಲ್ಸನ್ ಹೇಳಿದ್ದಾರೆ.

 ‘ರಶ್ಯನ್ನರು ನಡೆಸುತ್ತಿರುವ ಅಸ್ಥಿರ ಚಟುವಟಿಕೆಗಳನ್ನು ನಾನು ನೋಡಿದ್ದೇನೆ’ ಎಂದು ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯ ಮೂಲಕ ತಾಲಿಬಾನ್‌ಗೆ ರಶ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ ಎಂದಿದ್ದಾರೆ.

‘‘ಇಲ್ಲಿರುವ ಐಸಿಸ್ ಉಗ್ರರ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ಹೇಳಲಾಗುತ್ತಿದೆ’’ ಎಂದು ನಿಕೋಲ್ಸನ್ ಹೇಳುತ್ತಾರೆ.

‘‘ಬಳಿಕ, ತಾಲಿಬಾನಿಗಳ ಕೃತ್ಯವನ್ನು ಸಮರ್ಥಿಸಲು ರಶ್ಯ ಈ ನೆವವನ್ನು ಬಳಸುತ್ತದೆ ಹಾಗೂ ತಾಲಿಬಾನ್‌ಗೆ ಒಂದು ಹಂತದವರೆಗೆ ಬೆಂಬಲ ನೀಡುತ್ತದೆ’’ ಎಂದು ಅಮೆರಿಕನ್ ಸೇನಾಧಿಕಾರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News