ಶೇ. 90 ರಾಜ್ಯಸಭಾ ಸದಸ್ಯರು ಕೋಟ್ಯಾಧೀಶರು

Update: 2018-03-25 05:18 GMT

ಹೊಸದಿಲ್ಲಿ, ಮಾ. 25: ರಾಜ್ಯಸಭೆಯ ಸದಸ್ಯರ ಪೈಕಿ ಶೇಕಡ 90 ರಷ್ಟು ಮಂದಿ ಕೋಟ್ಯಾಧೀಶರಾಗಿದ್ದು, ಮೇಲ್ಮನೆಯ ಸಂಸದರ ಸರಾಸರಿ ಆಸ್ತಿ ಮೌಲ್ಯ 55 ಕೋಟಿ ರೂಪಾಯಿಗಳು ಎಂದು ಎಡಿಆರ್ ವರದಿ ಹೇಳಿದೆ.

ರಾಜ್ಯಸಭೆಯ 233 ಸದಸ್ಯರ ಪೈಕಿ 229 ಮಂದಿ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ ನ್ಯಾಷನಲ್ ಎಲೆಕ್ಷನ್ ವಾಚ್ ಹಾಗೂ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಘಟನೆಗಳು ಈ ಅಂಶ ಬಹಿರಂಗಪಡಿಸಿವೆ.

ಸಂಯುಕ್ತ ಜನತಾದಳದ ಸಂಸದ ಮಹೇಂದ್ರ ಪ್ರಸಾದ್ ಅತ್ಯಂತ ಶ್ರೀಮಂತ ಸಂಸದ ಎನಿಸಿಕೊಂಡಿದ್ದು, ಇವರ ಆಸ್ತಿ ಮೌಲ್ಯ 4078.41 ಕೋಟಿ ರೂಪಾಯಿ. ಸಮಾಜವಾದಿ ಪಕ್ಷದ ಜಯಾ ಬಚ್ಚನ್ (1001.64 ಕೋಟಿ) ಹಾಗೂ ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾ (857.11) ಕೋಟಿ ನಂತರದ ಸ್ಥಾನಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News