ಅಮೆರಿಕ: ಸೇನೆಯಲ್ಲಿ ತೃತೀಯಲಿಂಗಿಗಳ ನೇಮಕಕ್ಕೆ ನಿಷೇಧ

Update: 2018-03-25 17:27 GMT

ವಾಶಿಂಗ್ಟನ್,ಮಾ.25: ಅಮೆರಿಕದ ಸಶಸ್ತ್ರ ಪಡೆಗಳಲ್ಲಿ ಟ್ರಾನ್ಸ್‌ಜೆಂಡರ್ (ತೃತೀಯಲಿಂಗಿಗಳು)ಗಳ ನೇಮಕವನ್ನು ನಿಷೇಧಿಸುವ ತನ್ನ ಕ್ರಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಸದ್ಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟ್ರಾನ್ಸ್‌ಜೆಂಡರ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೇನೆಯಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ನಿಷೇಧಿಸುವ ವಿವಾದಾತ್ಮಕ ಆದೇಶಕ್ಕೆ ಟ್ರಂಪ್ ಕಳೆದ ವರ್ಷದ ಆಗಸ್ಟ್‌ನಲ್ಲೇ ಸಹಿಹಾಕಿದ್ದರು. ಆದರೆ ಎಲ್‌ಜಿಬಿಟಿ ಸಂಘಟನೆಗಳು ಕೋರ್ಟ್ ಮೆಟ್ಟಲೇರಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ಈ ಮಧ್ಯೆ ಟ್ರಾನ್ಸ್‌ಜೆಂಡರ್‌ಗಳಿಗೆ ಸೇನೆಯಲ್ಲಿ ನೇಮಕವನ್ನು ನಿಷೇಧಿಸುವ ಟ್ರಂಪ್ ಆದೇಶದ ವಿರುದ್ಧ ಡೆಮಾಕ್ರಾಟ್ ನಾಯಕ ನ್ಯಾನ್ಸಿ ಪೆಲೊಸಿ ಚಳವಳಿ ಆರಂಭಿಸಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸುವ, ಅರ್ಹತೆ ಹಾಗೂ ಧೈರ್ಯವುಳ್ಳ ಎಲ್ಲರಿಗೂ ಲಿಂಗಭೇದವಿಲ್ಲದೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News