ನಾಯಕ, ಉಪನಾಯಕ ಸ್ಥಾನ ತ್ಯಜಿಸಿದ ಸ್ಮಿತ್, ಡೇವಿಡ್ ವಾರ್ನರ್

Update: 2018-03-25 18:07 GMT

ಮೆಲ್ಬೋರ್ನ್, ಮಾ.25: ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಥಾನ ತ್ಯಜಿಸಿದ್ದಾರೆ.

 ಆಸ್ಟ್ರೇಲಿಯ ಸರಕಾರ ಸ್ಮಿತ್‌ರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ ಕಾರಣ ಕ್ರಿಕೆಟ್ ಆಸ್ಟ್ರೇಲಿಯ ರವಿವಾರ ಈ ಕ್ರಮ ಕೈಗೊಂಡಿದೆ.

ದಕ್ಷಿಣ ಆಫ್ರಿಕ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ 4ನೇ ದಿನದಾಟದಲ್ಲಿ ವಿಕೆಟ್‌ಕೀಪರ್ ಟಿಮ್ ಪೈನ್ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ರವಿವಾರ ಸ್ಮಿತ್ ಹಾಗೂ ವಾರ್ನರ್ ಮೈದಾನಕ್ಕೆ ಇಳಿದರು. ಕ್ರಿಕೆಟ್ ಆಸ್ಟ್ರೇಲಿಯ ಸ್ಮಿತ್ ಹಾಗೂ ವಾರ್ನರ್ ಅವರೊಂದಿಗೆ ಚರ್ಚಿಸಿದ ಬಳಿಕ ಇಬ್ಬರು 3ನೇ ಟೆಸ್ಟ್‌ನ 4ನೇ ದಿನ ನಾಯಕ ಹಾಗೂ ಉಪ ನಾಯಕ ಸ್ಥಾನ ತ್ಯಜಿಸಲು ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News