ಮಾಲಿನ್ಯ ನಿಯಂತ್ರಣ ಮಾಡಲು ನಡೆದ ಮಹಾಯಜ್ಞದಿಂದ ಆದ ಮಾಲಿನ್ಯ ಎಷ್ಟು ?

Update: 2018-03-26 16:31 GMT

ಮೀರತ್(ಉ. ಪ್ರದೇಶ), ಮಾ. 26: ಇಲ್ಲಿನ ಶ್ರೀ ಆಯುಚಂಡಿ ಮಹಾಯಜ್ಞ ಸಮಿತಿ ನಡೆಸಿರುವ 9 ದಿನಗಳ ವಿಶೇಷ ಮಹಾಯಜ್ಞ ಸೋಮವಾರ ಕೊನೆಗೊಂಡಿದೆ. 

ಇಲ್ಲಿನ ಭೈಸಾಲಿ ಮೈದಾನದಲ್ಲಿ ನಡೆಯುವ ಈ ವಿಶೇಷ ಯಜ್ಞಕ್ಕಾಗಿ ವಾರಣಾಸಿಯಿಂದ 350 ಬ್ರಾಹ್ಮಣರು ಬಂದು ಭಾಗವಹಿಸಿದ್ದರು. ಈ ಯಜ್ಞದ ಉದ್ದೇಶ, ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು. ಈ ಯಜ್ಞದ ವಿಶೇಷವೆಂದರೆ, ಇದಕ್ಕಾಗಿ 50,000 ಕೆಜಿ ಮರಗಳನ್ನು ಸುಡಲಾಗಿದೆ ! 

ಈ ಮಾಲಿನ್ಯ ತಡೆಯುವುದಕ್ಕಾಗಿ ನಡೆದ ಈ ವಿಶೇಷ ಯೋಗದಿಂದ ಎಷ್ಟು ಮಾಲಿನ್ಯ ಆಗಿದೆ ಎಂದು thequint.com ಲೆಕ್ಕ ಹಾಕಿದೆ. ಅದರ ಪ್ರಕಾರ ಒಟ್ಟು 50,000 ಕೆಜಿ ಮರ ಸುಟ್ಟಿದ್ದರಿಂದ ಸುಮಾರು 20,150 ಕೆಜಿ ( ಒಂದು ಕೆಜಿ ಮರಕ್ಕೆ 403 ಗ್ರಾಂ ನಂತೆ ) ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗಿದೆ. ಹಾಗೆಯೇ , 1875 ಕೆಜಿ ಕಾರ್ಬನ್ ಮೊನಾಕ್ಸೈಡ್ ಕೂಡ ಪರಿಸರಕ್ಕೆ ಸೇರಿಕೊಂಡಿದೆ. ಘನ ಹಾಗು ದ್ರವ ತ್ಯಾಜ್ಯಗಳ ಮಿಶ್ರಣವಾದ ಅತ್ಯಂತ ಅಪಾಯಕಾರಿ ಅಂಶ ಸುಮಾರು 100 ಕೆಜಿ ಉಸಿರಾಡುವ ಗಾಳಿಗೆ ಸೇರಿದೆ !

ಇದು ವಿಶ್ವ ಅರೋಗ್ಯ ಸಂಸ್ಥೆ ( ಡಬ್ಲ್ಯೂಎಚ್ ಒ ) ನೀಡಿರುವ ಮಾನದಂಡಗಳ ಆಧರಿತ ಲೆಕ್ಕಾಚಾರ. ಸಾಲದ್ದಕ್ಕೆ ಯಜ್ಞ ಮಾಡಿ ಉಳಿದ ಬೂದಿಯದ್ದು ಬೇರೆಯದೇ ಲೆಕ್ಕ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News