ಟ್ರಾಫಿಕ್ ನಿಯಮ ಉಲ್ಲಂಘಿಸಿದ ಈತನಿಗೆ 1.82 ಲಕ್ಷ ರೂ. ದಂಡ!

Update: 2018-03-26 16:53 GMT

ಹೈದರಾಬಾದ್, ಮಾ.26: ಒಂದು ವರ್ಷದಲ್ಲಿ 127 ಬಾರಿ ವೇಗದ ಮಿತಿಯನ್ನು ಉಲ್ಲಂಘಿಸಿದ ಹೋಂಡಾ ಜಾಝ್ ಮಾಲಕರೊಬ್ಬರಿಗೆ 1.82 ಲಕ್ಷ ರೂಪಾಯಿ ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

2017ರ ಎಪ್ರಿಲ್ 4ರಿಂದ 2018ರ ಮಾರ್ಚ್ 10ರವರೆಗೆ 127 ಬಾರಿ ವೇಗದ ಮಿತಿಯನ್ನು ಉಲ್ಲಂಘಿಸಲಾಗಿದೆ ಎಂದು ತೆಲಂಗಾಣ ರಾಜ್ಯದ ಇ-ಚಾನಲ್ ಪೋರ್ಟೆಲ್ ಹೇಳಿದೆ.

ಈ ಕಾರನ್ನು ಅಪಘಾತ ಪ್ರದೇಶವಾದ ಹೊರ ವರ್ತುಲ ರಸ್ತೆಯಲ್ಲಿ ವೇಗದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಹಿಡಿಯಲಾಗಿದೆ. ಮೊದಲು ಈ ಎಂಟು ಲೇನ್ ಹೆದ್ದಾರಿಯ ವೇಗದ ಮಿತಿಯನ್ನು 120 ಕಿಲೋಮೀಟರ್ ಎಂದು ನಿಗದಿಪಡಿಸಲಾಗಿತ್ತು. ಆದರೆ ವೇಗದ ಚಾಲನೆಯಿಂದ ಹಲವು ಅಪಘಾತಗಳು ಸಂಭವಿಸಿದ ಬಳಿಕ ಇದನ್ನು 100 ಕಿಲೋಮೀಟರ್ ಗೆ ಇಳಿಸಲಾಗಿತ್ತು.

ವೇಗದ ಮಿತಿ ಉಲ್ಲಂಘನೆಗೆ 1,435 ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಮಾಲಕನಿಗೆ ಒಟ್ಟು 1.83 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
"ಈ ಚಲನ್ ಬಗ್ಗೆ ಖಚಿತವಾಗಿ ತಪ್ಪಿತಸ್ಥನಿಗೆ ಸಂದೇಶ ಕಳುಹಿಸಲಾಗಿರುತ್ತದೆ. ಆದರೆ ವಾಹನ ರಿಜಿಸ್ಟ್ರೇಷನ್ ಅವಧಿಯಲ್ಲಿ ದಾಖಲಿಸಿದ ಫೋನ್ ನಂಬರ್ ಬಳಸದಿದ್ದರೆ, ಅವರಿಗೆ ಇದು ಹೋಗಿರಲಾರದು. ಅವರ ವಾಹನ ಸಂಖ್ಯೆಯನ್ನು ಎಲ್ಲ ಟೋಲ್‍ಗೇಟ್‍ಗಳಿಗೆ ಕಳುಹಿಸಲಾಗುತ್ತದೆ ಹಾಗೂ ವಾಹನ ತಡೆಯಲಾಗುತ್ತದೆ. ಚಲನ್‍ನಲ್ಲಿರುವ ಎಲ್ಲ ದಂಡ ಪಾವತಿಸುವಂತೆ ನೋಡಿಕೊಳ್ಳುತ್ತೇವೆ" ಎಂದು ಆರ್ ಜಿಐ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಡಿ.ವಿ.ರಂಗರೆಡ್ಡಿ ಹೇಳಿದ್ದಾಗಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News