ಅನೀಶ್ ಭಾನ್ವಾಲಾಗೆ ಬಂಗಾರ

Update: 2018-03-26 19:00 GMT

ಸಿಡ್ನಿ, ಮಾ.26: ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಜೂನಿಯರ್ ಇವೆಂಟ್‌ನಲ್ಲಿ ಭಾರತದ 15ರ ಹರೆಯದ ಶೂಟರ್ ಅನೀಶ್ ಭಾನ್ವಾಲಾ ಬಂಗಾರದ ಪದಕ ಜಯಿಸಿದ್ದಾರೆ.

 ಗರಿಷ್ಠ ಸ್ಕೋರ್(585) ಗಳಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಭಾನ್ವಾಲಾ ಆ ಬಳಿಕ ತನ್ನ ಇಬ್ಬರು ಸಹ ಆಟಗಾರರು ಹಾಗೂ ಮೂವರು ಚೀನಾ ಶೂಟರ್‌ಗಳನ್ನು ಹಿಂದಿಕ್ಕಿ 29 ಹಿಟ್ಸ್ ನೊಂದಿಗೆ ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಜಯಿಸಿದ್ದಾರೆ. ಚೀನಾದ ಚೆಂಗ್ ಝಿಪೆಂಗ್(27 ಹಿಟ್ಸ್) ಹಾಗೂ ಜರ್ಮನಿಯ ಸುಹಲ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಟೀಮ್ ಇವೆಂಟ್‌ನಲ್ಲಿ 1733 ಅಂಕ ಗಳಿಸಿ ಜೂನಿಯರ್ ವಿಶ್ವಕಪ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ ಚೀನಾ ಮೊದಲ ಸ್ಥಾನ ಪಡೆಯಿತು. ಭಾರತದ ಭಾನ್ವಾಲಾ, ಅನ್ಹದ್ ಜವಾಂಡ ಹಾಗೂ ಆದರ್ಶ್ ಸಿಂಗ್ ಬೆಳ್ಳಿ ಗೆದ್ದುಕೊಂಡರು. ಸಂಧು, ಜಯೇಶ್ ಹಾಗೂ ಜಸ್ಪಾಲ್ ಅವರನ್ನೊಳಗೊಂಡ ಭಾರತದ ಮತ್ತೊಂದು ಶೂಟಿಂಗ್ ತಂಡ ಕಂಚು ಜಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News