ಭಾರತದ 325 ಸದಸ್ಯರ ತಂಡಕ್ಕೆ ಕ್ರೀಡಾ ಸಚಿವಾಲಯ ಅನುಮೋದನೆ

Update: 2018-03-26 19:02 GMT

ಹೊಸದಿಲ್ಲಿ, ಮಾ.26: ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ ಎ.4 ರಿಂದ 15ರ ತನಕ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 325 ಸದಸ್ಯರನ್ನು ಒಳಗೊಂಡ ಭಾರತ ತಂಡ ಭಾಗವಹಿಸಲು ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ.

 ಭಾರತ ತಂಡದಲ್ಲಿ 221 ಅಥ್ಲೀಟ್‌ಗಳು, 58 ಕೋಚ್‌ಗಳು, 17 ವೈದ್ಯರುಗಳು ಹಾಗೂ ಫಿಜಿಯೋಥೆರಪಿಸ್ಟ್‌ಗಳು, 7 ಮ್ಯಾನೇಜರ್‌ಗಳು ಹಾಗೂ 22 ಇತರ ಅಧಿಕಾರಿಗಳು ಇರುತ್ತಾರೆ.

 ವೈಯಕ್ತಿಕ ಸ್ಪರ್ಧೆಗಳು, ಅಥ್ಲೆಟಿಕ್ಸ್ ಹಾಗೂ ಶೂಟಿಂಗ್‌ನಲ್ಲಿ ಕ್ರಮವಾಗಿ 31 ಹಾಗೂ 27 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ವೇಟ್ ಲಿಫ್ಟಿಂಗ್ ಹಾಗೂ ಕುಸ್ತಿಯಲ್ಲಿ ಕ್ರಮವಾಗಿ 16 ಹಾಗೂ 12 ಅಥ್ಲೀಟ್‌ಗಳಿದ್ದಾರೆ. ವಿಶ್ವದ ನಂ.2ನೇ ಆಟಗಾರ ಕೆ.ಶ್ರೀಕಾಂತ್ ಹಾಗೂ ವಿಶ್ವದ ನಂ.3 ಆಟಗಾರ್ತಿ ಪಿ.ವಿ.ಸಿಂಧು ಅವರನ್ನೊಳಗೊಂಡ 10 ಬ್ಯಾಡ್ಮಿಂಟನ್ ಆಟಗಾರರು ತಮ್ಮ ಪ್ರಾಬಲ್ಯ ತೋರಿಸಲಿದ್ದಾರೆ. ಸಿಂಧು ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಣಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News