ಸ್ಮೃತಿ ಮಂಧಾನ, ಸಿಂಧುಗೆ ಸ್ಥಾನ

Update: 2018-03-27 18:59 GMT

ಹೊಸದಿಲ್ಲಿ, ಮಾ.27: ಈ ವರ್ಷದ ಪೋರ್ಬ್ಸ್ 30 ಅಂಡರ್ 30 ಏಷ್ಯಾ ಪಟ್ಟಿಯಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಕ್ರಿಕೆಟ್ ಆಟಗಾರ್ತಿ ಸ್ಮತಿ ಮಂಧಾನ ಸ್ಥಾನ ಪಡೆದಿದ್ದಾರೆ.

ಮನೋರಂಜನೆ ಹಾಗೂ ಕ್ರೀಡಾ ವಿಭಾಗದಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ಬಾಲಿವುಡ್ ನಟಿ-ನಿರ್ಮಾಪಕಿ ಅನುಷ್ಕಾ ಶರ್ಮ ಹಾಗೂ ಭಾರತೀಯ ಪೋಲೊ ಟೀಮ್ ನಾಯಕ ಪದ್ಮನಾಭ ಸಿಂಗ್ ಅವರಿದ್ದಾರೆ.

 ವಿಶ್ವದ ನಂ.3ನೇ ಆಟಗಾರ್ತಿ ಸಿಂಧು ಮುಂದಿನ ತಿಂಗಳು ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಧ್ವಜಧಾರಿಣಿಯಾಗಿ ಆಯ್ಕೆಯಾಗಿದ್ದಾರೆ. ಗೋಲ್ಡ್‌ಕೋಸ್ಟ್‌ನಲ್ಲಿ ಚಿನ್ನ ಜಯಿಸಬಲ್ಲ ಫೇವರಿಟ್ ಆಟಗಾರ್ತಿಯರ ಪೈಕಿ ಒಬ್ಬರಾಗಿದ್ದಾರೆ. 2014ರಲ್ಲಿ ನಡೆದ ಗ್ಲಾಸ್ಗೊ ಗೇಮ್ಸ್‌ನಲ್ಲಿ ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದರು.

  ಎಡಗೈ ಆಟಗಾರ್ತಿ ಮಂಧಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿರುವ 21ರ ಹರೆಯದ ಮಂಧಾನ ಇತಿಹಾಸ ನಿರ್ಮಿಸಿದ್ದರು. ಆಸ್ಟ್ರೇಲಿಯದ ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡುತ್ತಿರುವ ಭಾರತದ ಇಬ್ಬರು ಆಟಗಾರ್ತಿಯರ ಪೈಕಿ ಮಂಧಾನ ಕೂಡ ಒಬ್ಬರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲಿಗರಾಗಿದ್ದಾರೆ.

20ರ ಹರೆಯದ ಪದ್ಮನಾಭ ಸಿಂಗ್ 20 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಭಾರತದ ಪೋಲೊ ತಂಡದ ನಾಯಕನಾಗಿದ್ದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಯುವ ಸದಸ್ಯನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News