ಆಸ್ಟ್ರೇಲಿಯ ತಂಡಕ್ಕೆ ಮ್ಯಾಟ್ ರೆನ್‌ಶಾ ಸೇರ್ಪಡೆ

Update: 2018-03-27 19:02 GMT

ಮೆಲ್ಬೋರ್ನ್, ಮಾ.27: ಆಸ್ಟ್ರೇಲಿಯ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಕ್ವೀನ್ಸ್‌ಲ್ಯಾಂಡ್ ಬ್ಯಾಟ್ಸ್‌ಮನ್ ಮ್ಯಾಟ್ ರೆನ್‌ಶಾರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಶೀಫೀಲ್ಡ್ ಶೀಲ್ಡ್ ಫೈನಲ್ ಪಂದ್ಯ ಮಂಗಳವಾರ ಸಂಜೆ ಕೊನೆಗೊಂಡ ತಕ್ಷಣ ಎಡಗೈ ಬ್ಯಾಟ್ಸ್‌ಮನ್ ರೆನ್‌ಶಾ ಆಸ್ಟ್ರೇಲಿಯದಿಂದ ಜೋಹಾನ್ಸ್‌ಬರ್ಗ್‌ಗೆ ಪ್ರಯಾಣಿಸಲಿದ್ದಾರೆ.

 ಮೂರನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ರೆನ್‌ಶಾ ಸೇರ್ಪಡೆಯಾಗಲಿದ್ದಾರೆ. ಸ್ಟೀವ್ ಸ್ಮಿತ್ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿರುವ ಕಾರಣ ದಕ್ಷಿಣ ಆಫ್ರಿಕ ವಿರುದ್ಧದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ.

  ರೆನ್‌ಶಾ ಆಸ್ಟ್ರೇಲಿಯ ವಿರುದ್ಧ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ಬಾಂಗ್ಲಾದೇಶದಲ್ಲಿ ಕೊನೆಯ ಪಂದ್ಯ ಆಡಿದ್ದಾರೆ. ರೆನ್‌ಶಾ ಆಡಿರುವ 10 ಪಂದ್ಯಗಳಲ್ಲಿ 36.44ರ ಸರಾಸರಿಯಲ್ಲಿ ಒಟ್ಟು 623 ರನ್ ಗಳಿಸಿದ್ದು, 184 ಗರಿಷ್ಠ ಸ್ಕೋರಾಗಿದೆ. ಸ್ಮಿತ್‌ರಿಂದ ತೆರವಾಗಿರುವ ಸ್ಥಾನಕ್ಕೆ ಪೀಟರ್ ಹ್ಯಾಂಡ್ಸ್ ಕಾಂಬ್ ಆಯ್ಕೆಯಾಗಿದ್ದಾರೆ. 4ನೇ ಟೆಸ್ಟ್ ಪಂದ್ಯ ಶುಕ್ರವಾರ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು ದ.ಆಫ್ರಿಕ ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಚೆಂಡು ವಿರೂಪ ಪ್ರಕರಣದ ಬಳಿಕ ಆಫ್ರಿಕ ಮಾನಸಿಕ ಮೇಲುಗೈ ಸಾಧಿಸಿದೆ.

ಆಸ್ಟ್ರೇಲಿಯ ಕ್ರಿಕೆಟ್ ತಂಡ: ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾಂಕ್ರಾಫ್ಟ್, ಪ್ಯಾಟ್ ಕಮ್ಮಿನ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹೇಝಲ್‌ವುಡ್, ಜಾನ್ ಹಾಲೆಂಡ್, ಉಸ್ಮಾನ್ ಖ್ವಾಜಾ, ನಥಾನ್ ಲಿಯೊನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಟಿಮ್ ಪೈನ್, ಮ್ಯಾಟ್ ರೆನ್‌ಶಾ, ರಿಚರ್ಡ್‌ಸನ್, ಚಾಡ್ ಸಯೆರ್ಸ್, ಮಿಚೆಲ್ ಸ್ಟಾರ್ಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News