ಹರಾರೆ ಕ್ರಿಕೆಟ್ ಅಧಿಕಾರಿಗೆ 20 ವರ್ಷ ನಿಷೇಧ

Update: 2018-03-27 19:04 GMT

ಹರಾರೆ, ಮಾ.27: ಕಳೆದ ವರ್ಷ ಪಂದ್ಯವೊಂದನ್ನು ಫಿಕ್ಸ್ ಮಾಡಲು ಝಿಂಬಾಬ್ವೆ ನಾಯಕ ಗ್ರೇಮ್ ಕ್ರೀಮರ್‌ಗೆ 30,000 ಡಾಲರ್ ಆಫರ್ ನೀಡಿದ್ದ ಹರಾರೆ ಕ್ರಿಕೆಟ್ ಅಧಿಕಾರಿಗೆ ಸಕ್ರಿಯ ಕ್ರಿಕೆಟ್ ಚಟುವಟಿಕೆಗಳಿಂದ 20 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಂಗಳವಾರ ತಿಳಿಸಿದೆ. ಹರಾರೆ ಮೆಟ್ರೋಪಾಲಿಟನ್ ಕ್ರಿಕೆಟ್‌ನ ಖಜಾಂಚಿ ಹಾಗೂ ಮಾರುಕಟ್ಟೆ ಪ್ರಬಂಧಕ ರಾಜನ್ ನಾಯರ್ ಅಂತಾರಾಷ್ಟ್ರೀಯ ಪಂದ್ಯವನ್ನು ಫಿಕ್ಸ್ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಗ್ರೇಮ್ ಕ್ರೀಮರ್‌ಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇವೆ. ಈ ಪ್ರಕ್ರಿಯೆಯಲ್ಲಿ ಅವರು ವೃತ್ತಿಪರರಾಗಿ ನಮ್ಮಿಂದಿಗೆ ಸಹಕರಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಯು) ಪ್ರಕಟನೆಯಲ್ಲಿ ತಿಳಿಸಿದೆ.

ನಾಯರ್ ಮ್ಯಾಚ್ ಫಿಕ್ಸಿಂಗ್ ಆಮಿಷ ಒಡ್ಡಿದ ತಕ್ಷಣ ಕ್ರೀಮರ್ ಐಸಿಸಿಗೆ ಮಾಹಿತಿ ನೀಡಿದ್ದರು. ನಾವು ಆ ವಿಷಯವನ್ನು ಕೂಲಂಕುಷವಾಗಿ ತನಿಖೆ ನಡೆಸಿದ್ದೇವೆ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News