ಆಸ್ಟ್ರೇಲಿಯದ 46ನೇ ಟೆಸ್ಟ್ ನಾಯಕನಾಗಿ ಟಿಮ್ ಪೈನ್ ಆಯ್ಕೆ

Update: 2018-03-28 07:22 GMT

ಜೋಹಾನ್ಸ್‌ಬರ್ಗ್, ಮಾ.28: ಆಸ್ಟ್ರೇಲಿಯದ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ವಿರುದ್ಧ ಒಂದು ಸುತ್ತಿನ ಕ್ರಮಕೈಗೊಂಡ ಬೆನ್ನಿಗೆ ತಾಸ್ಮಾನಿಯ ಕ್ರಿಕೆಟಿಗ ಟಿಮ್ ಪೈನೆ ಅವರನ್ನು ಟೆಸ್ಟ್ ನಾಯಕನಾಗಿ ಆಯ್ಕೆ ಮಾಡಲಾಗಿದೆ.

   ಪೈನೆ ಆಸ್ಟ್ರೇಲಿಯದ 46ನೇ ಟೆಸ್ಟ್ ನಾಯಕನಾಗಿ ನೇಮಕಗೊಂಡಿದ್ದಾರೆ. ಶುಕ್ರವಾರ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಮೊದಲ ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೂರನೇ ಟೆಸ್ಟ್‌ನಲ್ಲಿ 322 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿರುವ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸುವ ಕಠಿಣ ಸವಾಲು ಪೈನ್‌ಗೆ ಎದುರಾಗಿದೆ.

ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್‌ರನ್ನು ಸ್ವದೇಶಕ್ಕೆ ಕಳುಹಿಸಿಕೊಡಲಾಗಿದ್ದು,ಮ್ಯಾಥ್ಯೂ ರೆನ್‌ಶಾ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋ ಬರ್ನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಸ್ಮಿತ್ 3ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಮಾಡಿರುವುದನ್ನು ಒಪ್ಪಿಕೊಂಡ ತಕ್ಷಣ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 3ನೇ ಟೆಸ್ಟ್‌ನ ಉಳಿದ 1 ದಿನ ಪೈನ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News