ಬೆಂಗಳೂರು: ಮನೆ ಕೆಲಸದ ಸೋಗಿನಲ್ಲಿ ಕಳ್ಳತನ; ಮಹಿಳೆಯ ಬಂಧನ

Update: 2018-03-28 13:49 GMT

ಬೆಂಗಳೂರು, ಮಾ.28: ಮನೆ ಕೆಲಸ ಮಾಡುವ ಸೋಗಿನಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ಮಹಿಳೆಯೋರ್ವಳನ್ನು ಬಂಧಿಸಿರುವ ಸಂಜಯನಗರ ಠಾಣಾ ಪೊಲೀಸರು ವಜ್ರದ ಉಂಗುರ ಸೇರಿದಂತೆ 4.80ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ಅನಿತಾಕುಮಾರಿ ಬಂಧಿತ ಆರೋಪಿಯಾಗಿದ್ದು, ಈಕೆಯನ್ನು ಮನೆಕೆಲಸಕ್ಕೆಂದು ಭೂಪಸಂದ್ರ ನಿವಾಸಿಗಳಾದ ಡಾ.ಅಮೃತಾ ಕರೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಫೆ.16ರಂದು ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣಗಳು ಕಳುವಾಗಿದೆ. ಈ ಸಂಬಂಧ ಡಾ.ಅಮೃತಾ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತ ಶಿವಶಂಕರ್ ಮಾರ್ಗದರ್ಶನದಲ್ಲಿ ಸಂಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಶಾಂತ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬೆಂಗಳೂರು ನಿವಾಸ ಹಾಗೂ ತಿರುವನಂತಪುರ ನಿವಾಸದಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News