×
Ad

ಸೋಲಾರ್ ಅಳವಡಿಕೆಯಿಂದ ಹೈಟೆಕ್ ಆದ ಆಟೊ ರಿಕ್ಷಾ

Update: 2018-03-31 18:33 IST

ಬೆಂಗಳೂರು, ಮಾ.31: ಆಟೋ ರಿಕ್ಷಾ ಚಾಲಕನೊಬ್ಬ ತಮ್ಮ ಆಟೋಗೆ ಸೋಲಾರ್ ಅಳವಡಿಸಿ ಇತರೆ ಆಟೊ ರಿಕ್ಷಾ ಚಾಲಕರಿಗೂ ಮಾದರಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನವರಾದ ಅಶೋಕ್ ಅವರು 16 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಇತ್ತೀಚಿನ 6 ವರ್ಷಗಳಿಂದ ಹೊಸ ಆಟೊ ರಿಕ್ಷಾವೊಂದನ್ನು ಖರೀದಿಸಿ ಅದಕ್ಕೆ ಸೋಲಾರನ್ನು ಅಳವಡಿಸಿ ಎಲ್ಲ ಆಟೊ ರಿಕ್ಷಾ ಚಾಲಕರಿಗೂ ಮಾದರಿ ವ್ಯಕ್ತಿಯಾಗಿ ಬೆಳೆದಿದ್ದಾರೆ.

ಸೋಲಾರ್‌ನಿಂದಲೇ ಆಟೊ ರಿಕ್ಷಾದಲ್ಲಿ ಟಿವಿ, ಫ್ಯಾನ್, ಲೈಟಿಂಗ್ಸ್‌ಗಳನ್ನು ಅಳವಡಿಸಿದ್ದು, ಆಟೊ ರಿಕ್ಷಾ ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಆಟೊ ರಿಕ್ಷಾದಲ್ಲಿ ಕುಳಿತ ಪ್ರತಿಯೊಬ್ಬ ಪ್ರಯಾಣಿಕರೂ ಖುಷಿಗೊಂಡು ಚಾಲಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಈ ಮೆಚ್ಚುಗೆಗಳನ್ನೆ ಸ್ಫೂರ್ತಿಯನ್ನಾಗಿಸಿಕೊಂಡ ಚಾಲಕ ಅಶೋಕ್ ಅವರು ಇತರ ಆಟೊ ರಿಕ್ಷಾ ಚಾಲಕರಿಗೂ ನಿಮ್ಮ ಆಟೊಗಳಿಗೂ ಸೋಲಾರನ್ನು ಅಳವಡಿಸಿಕೊಳ್ಳಿ. ಇದರಿಂದ, ಪ್ರಯಾಣಿಕರು ಆಟೊಗಳನ್ನೆ ಹೆಚ್ಚೆಚ್ಚು ಬಳಸಲು ಇಷ್ಟಪಡುತ್ತಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೆ, ನಾಲ್ಕು ಗೆಳೆಯರ ಆಟೊಗಳಿಗೂ ಈಗಾಗಲೇ ಸೋಲಾರನ್ನು ಅಳವಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News