×
Ad

ಪಕ್ಷ, ಆರೆಸ್ಸೆಸ್ ಗೂ ಬೈದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ : ಹರತಾಳು ಹಾಲಪ್ಪ ಬೇಸರ

Update: 2018-03-31 20:45 IST

ಬೆಂಗಳೂರು, ಮಾ. 31: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭ ಕರಂದ್ಲಾಜೆ ಅವರಿಗೆ ಸಂಬಂಧ ಕಲ್ಪಿಸಿ, ಹೀನಾಮಾನವಾಗಿ ಯಾರು ಬೈದಿದ್ದರೋ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುತ್ತಿದ್ದಾರೆಂದು ಮಾಜಿ ಸಚಿವ ಹರತಾಳು ಹಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಬಸವೇಶ್ವರನಗರದ ತಮ್ಮ ನಿವಾಸದಲ್ಲಿ ಕುಟುಂಬ ಸಮೇತರಾಗಿ ಸಂಕಷ್ಟಹರ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಹೋದರಿ ಶೋಭಾ, ನನ್ನ ತಾಯಿ ಸಮಾನರಾದ ಭಾರತಿ ಶೆಟ್ಟಿಗೂ ನಮ್ಮ ನಾಯಕರೊಂದಿಗೆ ಸಂಬಂಧ ಕಲ್ಪಿಸಿದವರಿಗೆ ಟಿಕೆಟ್ ಕೊಡುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ಇನ್ನು ಕೆ.ಎಸ್.ಈಶ್ವರಪ್ಪ ಅವರ ಮುಖ ನೋಡಿದರೆ ಮೂರು ಓಟು ಬರೋದಿಲ್ಲ. ಆರೆಸ್ಸೆಸ್ ನವರು 200 ಕೋಟಿ ರೂ.ತಂದಿದ್ದಾರೆ ಎಂದು ಟೀಕೆ ಮಾಡಿದ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೊಡುತ್ತಾರೆಂದರೆ ನಾನೇನು ಹೇಳಬೇಕೋ ತಿಳಿಯದು. ಇದರಿಂದ ನನಗೆ ಬೇಸರವಾಗಿದೆ ಎಂದು ತನ್ನ ಅಳಲು ತೋಡಿಕೊಂಡರು.

ಮುಂಬರುವ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆಯುವ ನಿರೀಕ್ಷೆಯಿದೆ. ಅದು ನಿಜ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಪಕ್ಷದ ಮುಖಂಡರನ್ನು ಟೀಕಿಸಿದವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ದೂರಿದ ಅವರು, ಇರಲಿ ಬಿಡಿ, ಇನ್ನೇನು ಜೀವನ. ನನ್ನಂತೋರು ಸತ್ತದಿನ ಮಾಜಿ ಸಚಿವ ಹಾಲಪ್ಪ ನಿಧನ ಅಂತ ಬರೀತೀರಿ. ಅದನ್ನಂತೂ ತಪ್ಪಿಸಲು ಸಾಧ್ಯವಿಲ್ಲ ಅಲ್ವ. ಏನೇ ಆಗಲಿ ನಾವಿನ್ನು ಸುಮ್ಮನಿರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News