ನೀತಿಸಂಹಿತೆ ಉಲ್ಲಂಘನೆ : 49 ಲಕ್ಷ ಮೌಲ್ಯದ ನಗದು, ಮದ್ಯ, ಚಿನ್ನ, ಸೀರೆ ವಶ
ಬೆಂಗಳೂರು, ಮಾ.31: ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆಯಿಂದ 49,17,000 ವೌಲ್ಯದ ನಗದು, ಸೀರೆ, ಮದ್ಯ, ಚಿನ್ನವನ್ನು ಕಳೆದ 24 ಗಂಟೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್‌ಗಳು ರೂ. 49,17,000 ಮೌಲ್ಯದ 9,91,700 ನಗದು, 18.90 ಲೀ ಮದ್ಯ, 8 ರೇಷ್ಮೆ ಸೀರೆಗಳು, 2 ಕೆಜಿ 464 ಗ್ರಾಂ ಚಿನ್ನವನ್ನು ಕಳೆದ 24 ಗಂಟೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 1217 ಲೀ.ಗಳಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು 60 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 42 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
1,156 ಫ್ಲೈಯಿಂಗ ಸ್ಕ್ವಾಡ್ ಮತ್ತು 1,255 ಸ್ಪಾಟಿಕ್ ಸರ್ವೆಲೆನ್ಸ್ ಟೀಮ್‌ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಗಾರಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಇತರೆ ತಂಡಗಳು 12,537 ಗೋಡೆ ಬರಹ, 17,690 ಪೋಸ್ಟರ್‌ಗಳು, 7,711 ಬ್ಯಾನರ್‌ಗಳನ್ನು ಸಾರ್ವಜನಿಕ ಆಸ್ತಿಯಿಂದ ತೆಗೆದುಹಾಕಲಾಗಿದ್ದು 4 ಪ್ರಕರಣಗಳನ್ನು ದಾಖಲಿಸಾಗಿದೆ.
ಖಾಸಗಿ ಆಸ್ತಿಗಳಿಂದ 6,866 ಗೋಡೆ ಬರಹ, 7,949 ಪೋಸ್ಟರ್‌ಗಳು, 2,543 ಬ್ಯಾನರ್‌ಗಳನ್ನು ಸಾರ್ವಜನಿಕ ಆಸ್ತಿಯಿಂದ ತೆಗೆದುಹಾಕಲಾಗಿದ್ದು, ಒಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹಾಗೂ ಧ್ವನಿವರ್ಧಕದ ಉಲ್ಲಂಘನೆಯ ಒಂದು ಪ್ರಕರಣ, ಪರವಾನಿಗೆ ಇಲ್ಲದೆ ಅನಧಿಕೃತ ಸಭೆ ನಡೆಸಿದ 2 ಪ್ರಕರಣ ಹಾಗೂ ಮತದಾರರಿಗೆ ಆಮಿಷ ಒಡ್ಡಿನ 5 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ: 8,633 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದ್ದು, 1ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 178 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 255 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.