4ನೇ ಟೆಸ್ಟ್ ನಲ್ಲಿ ಆಫ್ರಿಕ ತಂಡ ಮೇಲುಗೈ

Update: 2018-03-31 18:50 GMT

ಜೋಹಾನ್ಸ್‌ಬರ್ಗ್, ಮಾ.31: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನ ದಕ್ಷಿಣ ಆಫ್ರಿಕ ತಂಡ ಮೇಲುಗೈ ಸಾಧಿಸಿದ್ದು, 488 ರನ್‌ಗಳಿಗೆ ಮೊದಲ ಇನಿಂಗ್ಸ್‌ನ್ನು ಮುಕ್ತಾಯಗೊಳಿಸಿದೆ.

  ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್ ನಲ್ಲಿ 38 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 110 ರನ್ ಗಳಿಸಿದ್ದು, ನಾಯಕ ಮತ್ತು ವಿಕೆಟ್ ಕೀಪರ್ ಟಿಮ್ ಪೈನ್ ಔಟಾಗದೆ 5 ರನ್ ಮತ್ತು ಪ್ಯಾಟ್ ಕಮಿನ್ಸ್ 7 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ದಕ್ಷಿಣ ಆಫ್ರಿಕ ತಂಡ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 488 ರನ್‌ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ತಂಡ ವೆರ್ನಾನ್ ಫಿಲ್ಯಾಂಡರ್ (17ಕ್ಕೆ 3), ಕಾಗಿಸೊ ರಬಾಡ (24ಕ್ಕೆ 1), ಮೊರ್ನೆ ಮೊರ್ಕೆಲ್( 23ಕ್ಕೆ 1) ಮತ್ತು ಕೇಶವ್ ಮಹಾರಾಜ್(35ಕ್ಕೆ 1) ದಾಳಿಗೆ ತತ್ತರಿಸಿತು.

ಉಸ್ಮಾನ್ ಖ್ವಾಜಾ(53) ಮಾತ್ರ ಅರ್ಧಶತಕದ ಕೊಡುಗೆ ನೀಡಿದರು. ಶಾನ್ ಮಾರ್ಷ್ (16) ಎರಡಂಕೆಯ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿದರೆ ತಂಡದ ಇತರ ಆಟಗಾರರು ಕಳಪೆ ಪ್ರದರ್ಶನ ನೀಡಿದರು.

ಬಾವುಮಾ ಸಾಹಸ: ಇದಕ್ಕೂ ಮೊದಲು ತೆಂಬಾ ಬಾವುಮಾ ಔಟಾಗದೆ ದಾಖಲಿಸಿದ 95 ರನ್‌ಗಳ ನೆರವಿನಲ್ಲಿ ದಕ್ಷಿಣ ಆಫ್ರಿಕ ಉತ್ತಮ ಮೊತ್ತ ದಾಖಲಿಸಿತ್ತು. ಮೊದಲ ದಿನದಾಟ ಕೊನೆಗೊಂಡಾಗ ದಕ್ಷಿಣ ಆಫ್ರಿಕ ತಂಡ 88 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 313 ರನ್ ಗಳಿಸಿತ್ತು. ತೆಂಬಾ ಬವುಮಾ 25 ರನ್ ಮತ್ತು ಕ್ವಿಂಟನ್ ಡಿ ಕಾಕ್ 7 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಇಂದು ಬ್ಯಾಟಿಂಗ್ ಮುಂದುವರಿಸಿ 85 ರನ್‌ಗಳ ಜೊತೆಯಾಟ ನೀಡಿದರು. ಕ್ವಿಂಟನ್ ಡಿ ಕಾಕ್ 39 ರನ್ ಗಳಿಸಿದರು. ವೆರ್ನಾನ್ ಫಿಲ್ಯಾಂಡರ್ 12 ರನ್ ಗಳಿಸಿದರು. 9ನೇ ವಿಕೆಟ್‌ಗೆ ಬವುಮಾ ಮತ್ತು ಕೇಶವ್ ಮಹಾರಾಜ್ 76 ರನ್‌ಗಳ ಜೊತೆಯಾಟ ನೀಡಿದರು. ಕೇಶವ್ ಮಹಾರಾಜ್ (45) ಅವರು 5 ರನ್‌ನಿಂದ ಅರ್ಧಶತಕ ವಂಚಿತಗೊಂಡರು.

ಮೊರ್ನೆ ಮೊರ್ಕೆಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಕಾರಣದಿಂದಾಗಿ ತೆಂಬಾ ಬವುಮಾ 95 ರನ್(194ಎ, 13ಬೌ) ಗಳಿಸಿ ಅಜೇಯರಾಗಿ ಉಳಿದರು. 29ನೇ ಟೆಸ್ಟ್‌ ನಲ್ಲಿ 2ನೇ ಶತಕ ದಾಖಲಿಸುವ ಅವರ ಕನಸು ನನಸಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News