ಡಬ್ಲ್ಯುಟಿಎ ರ್ಯಾಂಕಿಂಗ್: ಅಗ್ರ-10ರಲ್ಲಿ ಸ್ಟೀಫನ್ಸ್ ಗೆ ಸ್ಥಾನ

Update: 2018-04-02 18:23 GMT

ಪ್ಯಾರಿಸ್, ಎ.2: ಮಿಯಾಮಿ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿರುವ ಅಮೆರಿಕದ ಸ್ಲೋಯಾನೆ ಸ್ಟೀಫನ್ಸ್ ವೃತ್ತಿಜೀವನದಲ್ಲಿ ಮೊದಲ ಬಾರಿ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಸೋಮವಾರ ಬಿಡುಗಡೆಯಾಗಿರುವ ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಸ್ಟೀಫನ್ಸ್ 9ನೇ ಸ್ಥಾನ ಪಡೆದಿದ್ದಾರೆ. ರೋಮಾನಿಯದ ಸಿಮೋನಾ ಹಾಲೆಪ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು ಡೆನ್ಮಾರ್ಕ್‌ನ ಕರೊಲಿನ್ ವೋಝ್ನಿಯಾಕಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರು ಸ್ಥಾನ ಭಡ್ತಿ ಪಡೆದಿರುವ ಸ್ಟೀಫನ್ಸ್ 9ನೇ ಸ್ಥಾನಕ್ಕೇರಿದ್ದಾರೆ. ಪೆಟ್ರಾ ಕ್ವಿಟೋವಾ(10ನೇ), ಆ್ಯಂಜೆಲಿಕ್ ಕೆರ್ಬರ್(11ನೇ) ಹಾಗೂ ಡರಿಯಾ ಕಸಟ್‌ಕಿನಾ(12ನೇ)ತಲಾ ಒಂದು ಸ್ಥಾನ ಕುಸಿತ ಕಂಡಿದ್ದಾರೆ.

ಮಿಯಾಮಿ ಓಪನ್ ಫೈನಲ್‌ನಲ್ಲಿ ಸೋತಿರುವ ಜೆಲೆನಾ ಒಸ್ಟಾಪೆಂಕೊ ಅಗ್ರ-5ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

►ಡಬ್ಲ್ಯುಟಿಎ ರ್ಯಾಂಕಿಂಗ್

1. ಸಿಮೊನಾ ಹಾಲೆಪ್(ರೋಮಾನಿಯ), 2. ಕರೋಲಿನ್ ವೋಝ್ನಿಯಾಕಿ(ಡೆನ್ಮಾರ್ಕ್), 3. ಗಾರ್ಬೈನ್ ಮುಗುರುಝ(ಸ್ಪೇನ್),4. ಎಲಿನಾ ಸ್ವಿಟೋಲಿನಾ(ಉಕ್ರೇನ್),5. ಜೆಲೆನಾ ಒಸ್ಟಾಪೆಂಕೊ(ಲಾಟ್ವಿಯ), 6. ಕರೊಲಿನಾ ಪ್ಲಿಸ್ಕೋವಾ(ಝೆಕ್), 7. ಕರೊಲಿನಾ ಗಾರ್ಸಿಯಾ(ಫ್ರಾನ್ಸ್),8. ವೀನಸ್ ವಿಲಿಯಮ್ಸ್,9. ಸ್ಲೋಯಾನ್ ಸ್ಟೀಫನ್ಸ್(ಅಮೆರಿಕ),10.ಪೆಟ್ರಾ ಕ್ವಿಟೋವಾ(ಝೆಕ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News