ಆ್ಯಂಡರ್ಸನ್ ಐತಿಹಾಸಿಕ ಸಾಧನೆ

Update: 2018-04-03 18:53 GMT

ಕ್ರೈಸ್ಟ್‌ಚರ್ಚ್, ಎ.3: ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಓವರ್ ಬೌಲಿಂಗ್ ಮಾಡಿದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಕಿವೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 30,020ನೇ ಎಸೆತ ಎಸೆಯುವ ಮೂಲಕ ಈ ಮೈಲುಗಲ್ಲು ತಲುಪಿದ್ದಾರೆ.

ಆ್ಯಂಡರ್ಸನ್ 2001ರಲ್ಲಿ ನಿವೃತ್ತರಾದ ವೆಸ್ಟ್‌ಇಂಡೀಸ್ ಮಾಜಿ ವೇಗದ ಬೌಲರ್ ಕರ್ಟ್ನಿ ವಾಲ್ಶ್ ದಾಖಲೆ ಮುರಿದರು. ವಾಲ್ಶ್ 30,019 ಎಸೆತ ಎಸೆದಿರುವ ಸಾಧನೆ ಮಾಡಿದ್ದಾರೆ. ವಾಲ್ಶ್ ವೃತ್ತಿಜೀವನದಲ್ಲಿ 519 ವಿಕೆಟ್‌ಗಳನ್ನು ಪಡೆದಿದ್ದಾರೆ. ಆ್ಯಂಡರ್ಸನ್ ಈ ತನಕ 531 ವಿಕೆಟ್ ಕಬಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಎಸೆತ ಎಸೆದಿರುವ ಬೌಲರ್‌ಗಳ ಪಟ್ಟಿಯಲ್ಲಿ ಆ್ಯಂಡರ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ಸ್ಪಿನ್ನರ್‌ಗಳಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(44,039) ಮೊದಲ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News