ಯುಎಇ: ಕೆಸಿಎಫ್ ನಿಂದ 'ಕರ್ನಾಟಕ ಫ್ಯಾಮಿಲಿ ಫೆಸ್ಟ್- 2018'

Update: 2018-04-04 12:10 GMT

ದುಬೈ, ಮಾ.4: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಇದರ ಐದನೇ ವಾರ್ಷಿಕೋತ್ಸವ ಪ್ರಯುಕ್ತ ಇತ್ತೀಚೆಗೆ 'ಕರ್ನಾಟಕ ಫ್ಯಾಮಿಲಿ ಫೆಸ್ಟ್-2018' ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಜ್ಮಾನ್ ನಲ್ಲಿರುವ ತುಂಬೆ ಯುನಿವರ್ಸಿಟಿ ಮೈದಾನದಲ್ಲಿ ಜರುಗಿದ ಸಮಾರಂಭಕ್ಕೆ ಅಸ್ಸಯ್ಯದ್ ಹಸನ್ ಅಹ್ದಲ್ ತಂಙಳ್  ದುಆದೊಂದಿಗೆ  ಚಾಲನೆ ನೀಡಿದರು. ಕೆಸಿಎಫ್ ಯುಎಇ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಜಲೀಲ್ ನಿಝಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉದ್ಯಮಿ ಅಬ್ದುಲ್ ಲತೀಫ್ ಮುಲ್ಕಿ ಕಾರ್ಯಕ್ರಮ ಉಧ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹರೀಶ್ ಶೆಟ್ಟಿ ಶೇರಿಗಾರ್ ಮಾತನಾಡಿ ಶುಭ ಹಾರೈಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕರಾದ ಉಸ್ಮಾನ್ ಹಾಜಿ ನಾಪೋಕ್ಲು, ಅಬ್ದುಲ್ಲಾ ಹಾಜಿ ನಲ್ಕ, ಕರೀಂ ಹಾಜಿ ಬಿಕರ್ನಕಟ್ಟೆ, ವಿವಿಧ ಝೋನ್ ಗಳ ನಾಯಕರುಗಳು, ದುಬೈ ಉದ್ಯಮಿಗಳಾದ ಅಬ್ದುಲ್ ಹಮೀದ್ ಸ್ಟಾರ್ ಲಿಂಕ್ ಈ  ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫ್ಯಾಮಿಲಿ ಫೆಸ್ಟ್ ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್ ರಹೀಮ್ ಕೋಡಿ ಸ್ವಾಗತಿಸಿದರು. ರಿಯಾಝ್ ಕೊಂಡಂಗೇರಿ ವಂದಿಸಿದರು.

ಇದೇ ಸಂದರ್ಭ ಅಸ್ಸುಫ್ಫಾದ ವಿದ್ವಾಂಸರಿಗೆ ಕಿರುಕಾಣಿಕೆ ಮತ್ತು ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಖಾಸಿಂ ಮದನಿ ಕರಾಯ ಮತ್ತು ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್ ನೇತೃತ್ವ ವಹಿಸಿದ್ದರು. ಇಬ್ರಾಹೀಂ ಸಖಾಫಿ ಕೆದುಂಬಾಡಿ ಆಧ್ಯಾತ್ಮಿಕ ತರಗತಿಗೆ ನೇತೃತ್ವ ನೀಡಿದರು. ಆರ್.ಎಸ್.ಸಿ. ನಾಯಕರಾದ ಶರೀನ್ ಅಹ್ಮದ್ ನೇತೃತ್ವದಲ್ಲಿ ಶೈಕ್ಷಣಿಕ ಮಾಹಿತಿ ಶಿಬಿರ ನಡೆಯಿತು.

ಬಳಿಕ ಅತ್ಯಾಕರ್ಷಕ ಫ್ಯಾಮಿಲಿ ಫೆಸ್ಟ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಸದಿಂದ ರಸ, ಬೆಂಕಿರಹಿತ ಅಡುಗೆ, ಪ್ರಬಂಧ ಮೊದಲಾದ ಆಕರ್ಷಣೀಯ ಸ್ಪರ್ಧೆಗಳಲ್ಲಿ ಮುನ್ನೂರೈವತ್ತರಷ್ಟು ಕನ್ನಡಿಗ ಮಹಿಳೆಯರು ಪಾಲ್ಗೊಂಡಿದ್ದರು.

ಮಹಿಳೆಯರು ತಯಾರಿಸಿದ ಬೆಂಕಿರಹಿತ ಅಡುಗೆಯ ತೀರ್ಪುಗಾರರಾಗಿ ಅಬ್ದುಲ್ ಲತೀಫ್ ಸಹಕರಿಸಿದರು. ವಿದ್ಯಾರ್ಥಿಗಳಿಗಾಗಿ ಕಿರಾಅತ್, ಹಾಡು, ಭಾಷಣ, ಡ್ರಾಯಿಂಗ್ ಮೊದಲಾದ ಸ್ಪರ್ಧೆಗಳಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದರು. ಪ್ರತಿಭೋತ್ಸವವನ್ನು ಶಾಹುಲ್ ಹಮೀದ್ ಸಖಾಫಿ ಮತ್ತು ರಜಬ್ ಉಚ್ಚಿಲ ನಿರ್ವಹಿಸಿದರು. ನವಾಝ್ ಕೋಟೆಕಾರ್, ಅಶ್ರಫ್ ಸತ್ತಿಕಲ್, ರಫೀಕ್ ಮುಲ್ಕಿ, ಅಬ್ದುಲ್ ಲತೀಫ್ ತಿಂಗಳಾಡಿ, ಸಮದ್ ಬಿರಾಳಿ ಅಜ್ಮಾನ್ ಆಟೋಟ ಸ್ಪರ್ಧೆಗಳ ಉಸ್ತುವಾರಿ ವಹಿಸಿದ್ದರು. ಉಮರ್ ಮಾಸ್ಟರ್ ಅಲ್ ಐನ್ ಆಟೋಟ ಸ್ಪರ್ಧೆಗಳನ್ನು ನಿರ್ವಹಣೆ ಮಾಡಿದರು.

ಸಮಾರೋಪ:

ಸಮಾರೋಪ ಸಮಾಜ ಸೇವಕ, ಉದ್ಯಮಿ ಬಿ.ಎ.ಅಶ್ರಫ್ ಮೊಹಿಯುದ್ದೀನ್ ತುಂಬೆ ಸಮಾರಂಭವನ್ನು ಉದ್ಘಾಟಿಸಿದರು. ಉಜಿರೆ ಮಲ್ಜ-ಅ ಸಂಸ್ಥೆಯ ಜನರಲ್ ಮ್ಯಾನೇಜರ್ ಮಹಬೂಬುರಹ್ಮಾನ್ ಸಖಾಫಿ ಕಿನ್ಯ ಮುಖ್ಯ ಭಾಷಣ ಮಾಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಮೀದ್ ಸಆದಿ ಈಶ್ವರಮಂಗಿಲ ಮಾತನಾಡಿ, ಐದನೇ ವಾರ್ಷಿಕೋತ್ಸವ ಪ್ರಯುಕ್ತ ಐದು ಬಡಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಡುವ ಮತ್ತು ಐದು ಸ್ಥಳಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವುದು ಮತ್ತು ಐದು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಎಎಸ್ ಅಥವಾ ಐಪಿಎಸ್ ವರೆಗೆ ಉಚಿತವಾಗಿ ಕಲಿಸಿಕೊಡುವ ಯೋಜನೆಯಾ ಯಶಸ್ವಿಗೆ ಕೈ ಜೋಡಿಸಲು ಮನವಿ ಮಾಡಿದರು.

ಫ್ಯಾಮಿಲಿ ಫೆಸ್ಟ್ ಪ್ರಯುಕ್ತ 3 ಮಂದಿಗೆ ಘೋಷಿಸಿದ್ದ ಉಮ್ರಾ ಟೂರ್ ನ್ನು ಅಲ್ ಅರೀಬ್ ಗ್ರೂಪ್ ಇದರ ರಾಫೆಲ್ ಡ್ರಾ ಸಿ.ಇ.ಓ ಅಬ್ದುಲ್ ರಝಾಕ್ ಹಾಜಿ ನಿರ್ವಹಿಸಿದರು. ನಂತರ ಮಾತನಾಡಿದ ಅವರು ಕೆ.ಸಿ.ಎಫ್ ನಡೆಸುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಪ್ರಶಂಸಿಸಲೇಬೇಕು. ಎಲ್ಲರೂ ಈ ಸಂಘಟನೆಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಗಲ್ಫ್ ರಾಷ್ಟ್ರೀಯ ಸಮಿತಿಯ ಇಶಾರ ಸಂಚಾಲಕರಾದ ಕರೀಂ ಮುಸ್ಲಿಯಾರ್ ಉರುವಾಲಪದವು ರವರು ಇಶಾರ ಚಂದಾದಾರ ಅಭಿಯಾನದಲ್ಲಿ ಅತೀ ಹೆಚ್ಚು ಚಂದಾದಾರರನ್ನು ಸೇರಿಸಿದ ಕಾರ್ಯಕರ್ತರೊಬ್ಬರಿಗೆ ಉಚಿತ ಉಮ್ರಾ ಪ್ಯಾಕೇಜ್ ಘೋಷಿಸಿದ್ದು ಅದಕ್ಕೆ  ಕೆಸಿಎಫ್ ಅಜ್ಮಾನ್ ಝೋನ್ ರಿಲೀಫ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡಿಪ್ಪಾಡಿ ಆಯ್ಕೆಯಾದರು. ಹಿರಿಯ ಉದ್ಯಮಿಗಳಾದ, ಸಿಎ ಅಬ್ದುಲ್ಲ ಮದುಮೂಲೆ, ಮುಹಮ್ಮದ್ ಇಕ್ಬಾಲ್ ಹೆಜಮಾಡಿ ಮತ್ತು ಎಂ.ಇ.ಮೂಳೂರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯದ್ ತಾಹಿರ್ ತಂಙಳ್ ಅಜ್ಮಾನ್, ಶರೀಫ್ ಸಅದಿ ಅಜ್ಮಾನ್, ಅಬ್ದುಲ್ ಜಲೀಲ್ ನಿಝಾಮಿ, ಕೆಸಿಎಫ್ ಅಬುಧಾಬಿ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ, ಶಾರ್ಜಾ ಝೋನ್ ಅಧ್ಯಕ್ಷರಾದ ಅಬೂಸ್ವಾಲಿಹ್ ಸಖಾಫಿ, ದುಬೈ ಸೌತ್ ಝೋನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ, ಅಜ್ಮಾನ್ ಝೋನ್ ಅಧ್ಯಕ್ಷರಾದ  ಶಾಫಿ ಸಖಾಫಿ ಕೊಂಡಂಗೇರಿ, ದುಬೈ ನಾರ್ತ್  ಝೋನ್ ಅಧ್ಯಕ್ಷರಾದ  ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಅಲ್ ಐನ್ ಝೋನ್ ಅಧ್ಯಕ್ಷರಾದ ಮುಸ್ತಫ ಮುದುಂಗಾರು, ರಾಷ್ಟ್ರೀಯ ಸಮಿತಿ ಇಶಾರ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ, ಹಿರಿಯ ಉದ್ಯಮಿಗಳಾದ ಬಶೀರ್ ಹಾಜಿ ಬೊಳ್ವಾರ್, ಸ್ವಾಗತ ಸಮಿತಿ ಕೋಶಾಧಿಕಾರಿ ಖಾದರ್ ಸಾಲೆತ್ತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫ್ಯಾಮಿಲಿ ಫೆಸ್ಟ್ ಸ್ವಾಗತ ಸಮಿತಿಯ ಅಧ್ಯಕ್ಷ, ಅಲ್ ರಬೀಹ ಗ್ರೂಪ್ ಮಾಲಕ ಮುಹಮ್ಮದ್ ಇಕ್ಬಾಲ್ ಸಿದ್ದಕಟ್ಟೆ ವಿಜೇತ ಚಾಂಪಿಯನ್ ಟ್ರೋಫಿ ವಿತರಿಸಿದರು. ವಿವಿಧ ಝೋನ್ ಗಳನ್ನು ಪ್ರತಿನಿಧಿಸಿ ನಡೆದ ಪ್ರತಿಭೋತ್ಸವದಲ್ಲಿ ಶಾರ್ಜಾ ಝೋನ್ ಅತಿ ಹೆಚ್ಚು ಅಂಕ ಗಳಿಸಿ ಚಾಂಪಿಯನ್ ಪಟ್ಟ ಗಳಿಸಿತು. ಆಟೋಟಗಳಲ್ಲಿ ವಿಜಯಿಯಾದ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಫ್ಯಾಮಿಲಿ ಫೆಸ್ಟ್ ಸ್ವಾಗತ ಸಮಿತಿಯ ಹಣಕಾಸು ನಿರ್ವಹಣಾ ಸಮಿತಿಯ ಅಧ್ಯಕ್ಷ ಇಕ್ಬಾಲ್ ಕುಂದಾಪುರ ಮಾತನಾಡಿದರು. 

 ಅಲ್ ಖಮರ್ ಕಲ್ಚರಲ್ ಫೋರಂ ತಂಡ ಆಕರ್ಷಕ ದಫ್ ಪ್ರದರ್ಶನ ನೀಡಿತು. ಕೆಸಿಎಫ್ ನ್ಯಾಷನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್ ಸ್ವಾಗತಿಸಿದರು. ಅಲ್ ಖಮರ್ ಕಲ್ಚರಲ್ ಫೋರಂ ತಂಡ ಆಕರ್ಷಕ ದಫ್ ಪ್ರದರ್ಶನ ನೀಡಿತು. ನಂತರ ಕೆ.ಸಿ.ಎಫ್ ನ ಐದು ವರ್ಷಗಳ ಕಾರ್ಯವೈಖರಿಗಳನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.  

ವಿವಿಧ ಕಾರ್ಯುಕ್ರಮಗಳನ್ನು ಶರೀಫ್ ಸಾಲೆತ್ತೂರು, ಶುಕೂರ್ ಮಣಿಲ, ಹಕೀಮ್ ತುರ್ಕಲಿಕೆ, ರಫೀಕ್ ಕಲ್ಲಡ್ಕ, ಮಜೀದ್ ಮಂಜನಾಡಿ ನಿರ್ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೂಸ ಬಸರ ಹಾಗೂ ನಿಝಾಮುದ್ದೀನ್ ಮದನಿ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News